ದಮನಿತ ಮಹಿಳೆಯರಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಬಳ್ಳಾರಿ ಮೇ 289: ಜಿಲ್ಲೆಯ ಕುರುಗೋಡು ತಾಲೂಕಿನ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಇಂದು ದಮನಿತ ಮಹಿಳೆಯರ ಸಂಘದ ತಾಲೂಕು ಅಧ್ಯಕ್ಷ ಹೆಚ್ ಯಂಕಮ್ಮ ಅವರು ದಮನಿತ ಮಹಿಳೆಯರಿಗೆ ಆಹಾರದ ಕಿಟ್ಟುಗಳನ್ನು ವಿತರಿಸಿದರು.
ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿ. ಕೊರನಾ ಸಂಕಷ್ಟದಲ್ಲಿ ದಮನಿತ ಮಹಿಳೆಯರಿಗೆ ಆಹಾರದ ಕಿಟ್ಟನ ವಿತರಿಸುವ ಮುಖಾಂತರ ಒಂದು ಒಳ್ಳೆ ಕಾರ್ಯ ಮಾಡಿದ್ದೀರಿ ಎಂದರು. ಉಪ ತಹಶೀಲ್ದಾರ್ ಮಲ್ಲೇಶಪ್ಪ ಪಿಎಸ್ ಐ ಮೌನೇಶ್ ರಾಥೋಡ್ ಅವರುಗಳು ಲಾಕ್ಡೌನ್ ದಿನಗಳಲ್ಲಿ ದುಡಿಮೆಯಿಲ್ಲದೆ ಜೀವನ ಸಾಗಿಸಲು ತುಂಬಾ ಕಷ್ಟ ಇಂತಹ ಸಮಯದಲ್ಲಿ ಆಹಾರದ ಕಿಟ್ಟುಗಳನ್ನು ವಿತರಿಸಿರುವುದು ಬಡವರ್ಗಕ್ಕೆ ತುಂಬಾ ಅನುಕೂಲವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಎಸ್.ಐ. ಹೂವಣ್ಣ, ಗ್ರಾಮ‌ಲೆಕ್ಜಾಧಿಕಾರಿ ಯಮನೂರಪ್ಪ, ಸಿಪಿಎಂ ಪಕ್ಷದ ಮುಖಂಡರುಗಳಾದ ಎನದ. ಸೋಮಪ್ಪ, ಎನ್, ಹುಲುಗಪ್ಪ, ಸುಬ್ರಹ್ಮಣ್ಯ, ಮಲ್ಲಿ, ವೀರ ಪ್ರಭುಗೌಡ ಮೊದಲಾದವರು ಉಪಸ್ಥಿತರಿದ್ದರು.