ದಪ್ಪ ಮೆಣಸಿನಕಾಯಿ ಮೊಸರು ಬಜ್ಜಿ

ಬೇಕಾಗುವ ಪದಾರ್ಥಗಳು :
ದಪ್ಪ ಮೆಣಸಿನಕಾಯಿ : ಎರಡು
ಮೊಸರು : ಎರಡು ಕಪ್
ಹಸಿಮೆಣಸಿನಕಾಯಿ: ಒಂದು
ಸಾಸಿವೆ: ಅರ್ಧ ಚಮಚ
ಜೀರಿಗೆ : ಅರ್ಧ ಚಮಚ
ಮೆಂತ್ಯ : ಸ್ವಲ್ಪ
ಇಂಗು –:ಚಿಟಿಕೆ
ಕರಿಬೇವು: ಒಂದು ಎಸಳು
ಉಪ್ಪು : ರುಚಿಗೆ ತಕ್ಕಷ್ಟು
ಎಣ್ಣೆ: ಎರಡು ಚಮಚ
ಸಕ್ಕರೆ: ಒಂದು ಚಮಚ
ಮಾಡುವ ವಿಧಾನ : ಮೊದಲು ದಪ್ಪ ಮೆಣಸಿನಕಾಯಿಗಳನ್ನು ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಗ್ಗರಣೆಗೆ ಎರಡು ಚಮಚ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು, ಮೆಂತ್ಯ, ಹೆಚ್ಚಿದ ಹಸಿಮೆಣಸಿನಕಾಯಿ, ಇಂಗು ಹಾಕಿ ಬಾಡಿಸಿ. ಒಂದು ಬಟ್ಟಲಿಗೆ ಮೊಸರನ್ನು ಹಾಕಿ ಅದಕ್ಕೆ ಕತ್ತರಿಸಿದ ದಪ್ಪ ಮೆಣಸಿನಕಾಯಿ , ಉಪ್ಪು, ಸಕ್ಕರೆ, ಒಗ್ಗರಣೆಯನ್ನು ಹಾಕಿ ಮಿಕ್ಸ್ ಮಾಡಿದರೆ ದಪ್ಪ ಮೆಣಸಿನಕಾಯಿ ಮೊಸರು ಬಜ್ಜಿ ತಿನ್ನಲು ಸಿದ್ಧ.