ದನ- ಕರು ಗಳನ್ನು ರಸ್ತೆಗೆ ಬಿಟ್ಟರೆ ೨೫ ಸಾವಿರ ದಂಡ ,ಪ್ರಕರಣ ದಾಖಲು

ಸಿಂಧನೂರು,ಸೆ.೨೭- ಯಾವುದೇ ಸಾರ್ವಜನಿಕರು ತಮ್ಮ ಸ್ವಂತ ಸಾಕು ದನ – ಕರು ,ಎಮ್ಮೆ ,ಎತ್ತು ,ಕುರಿ ,ಮೇಕೆ ,ಕತ್ತೆ ಗಳನ್ನು ರಸ್ತೆಗೆ ಬಿಟ್ಟರೆ ಅಂತಹ ಮಾಲಿಕರಿಗೆ ೨೫೦೦೦ ರೂ ದಂಡ ಹಾಗೂ ಪುರಸಭೆ ಕಾಯ್ದೆ ಅನುಸಾರ ಪೋಲಿಸ್ ಪ್ರಕರಣ ದಾಖಲಿಸಲಾಗುವದೆಂದು ಪೌರಾಯುಕ್ತ ಮಂಜುನಾಥ ಗುಂಡೂರು ಸಾರ್ವಜನಿಕರಲ್ಲಿ ಪತ್ರಿಕೆ ಮೂಲಕ ಮನವರಿಕೆ ಮಾಡಿದರು.
ಸಿಂಧನೂರು ನಗರ ಸಭೆಯು ಮಾದರಿ ಡೈರಿ ಉಪ ಕಾನೂನನ್ನು ’ ಅಳವಡಿಸಿಕೊಂಡಿದ್ದು ಅದರ ಭಾಗವಾಗಿ ನಗರದಲ್ಲಿನ ಸಿಂಧನೂರು- ರಾಯಚೂರು ರಸ್ತೆ, ಕುಷ್ಟಗಿ ರಸ್ತೆ, ಗಂಗಾವತಿ ರಸ್ತೆಯ ಅಕ್ಕ- ಪಕ್ಕ ಹಾಗೂ ಮಧ್ಯ ರಸ್ತೆಯಲ್ಲಿರುವ ಬಿಡಾಡಿ ದನಗಳನ್ನು ಸೆರೆ ಹಿಡಿದು ಗೋಶಾಲೆಗೆ ಕಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಈಗಾಗಾಲೇ ಎಂಟಕ್ಕೂ ಅಧಿಕ ಬಿಡಾಡಿ ದನಗಳನ್ನು ಸೆರೆ ಹಿಡಿದು ಗೋಶಾಲೆಗೆ ಕಳಿಸಲು ನಗರ ಸಭೆ ಕಾರ್ಯ ಪ್ರವೃತ್ತವಾಗಿದೆ.
ಮಾದರಿ ಡೈರಿ ಉಪ ಕಾನೂನಿನ ಪ್ರಕಾರ ಯಾವುದೇ ಸಾರ್ವಜನಿಕರು ತಮ್ಮ ಸಾಕು ದನ, ಕರು, ಎಮ್ಮೆ, ಎತ್ತು, ಕುರಿ, ಮೇಕೆ, ಕತ್ತೆಗಳನ್ನು ರಸ್ತೆಗೆ ಬಿಟ್ಟಲ್ಲಿ ಅದರ ಮಾಲಿಕರಿಗೆ ೨೫೦೦೦ ರೂಪಾಯಿ ದಂಡ ಹಾಗೂ ಪುರಸಭೆ ಕಾಯ್ದೆಯನುಸಾರ ಸದರಿ ಮಾಲಿಕರ ವಿರುದ್ಧ ಪೊಲೀಸ್ ಕೆಸ್ ದಾಖಲಿಸಲಾಗುವುದು,
ಯಾವುದೇ ವ್ಯಕ್ತಿ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಬೇಕಂದಲ್ಲಿ ಕಡ್ಡಾಯವಾಗಿ ಈ ಉಪ ಕಾನೂನಿನಡಿ ನಗರಸಭೆಯ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ,
ಬಿಡಾಡಿ ದನಗಳನ್ನು ಬಿಡುವುದರಿಂದ ಸಂಚಾರಿ ನಿಯಮ ಉಲ್ಲಂಘನನೆಯಾಗುವುದಲ್ಲದೇ , ಅಪಘಾತಗಳು ಸಂಭವಿಸಬಹುದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಬಿಡಾಡಿ ದನಗಳನ್ನು ಸೆರೆ ಹಿಡಿಯಲಾಗಿದೆಂದು ತಿಳಿಸಿದರು.
ಆರೋಗ್ಯ ಶಾಖೆಯ ನಿರೀಕ್ಷಕ ಮಹೇಶ, ಲಕ್ಷ್ಮಿಪತಿ, ಮೆಸ್ತ್ರಿ ಅಮರೇಶ,ವೆಂಕೊಬ, ಪೌರ ಕಾರ್ಮಿಕರ ತಂಡ ಹಾಜರಿದ್ದರು.