ದನದ ಸಂತೆ ಯಾದ ಕೋವಿಡ್ ಟೆಸ್ಟ್ ಸ್ಥಳ

ನಂಜನಗೂಡು:ಮೇ.21: ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲಿ ಕೋವಿಡ್ ಟೆಸ್ಟ್ ನಡೆಯುತ್ತಿದೆ. ಆದರೆ ಪ್ರತಿದಿನ 200 ಜನಗಳಿಗೆ ಟೆಸ್ಟ್ ಮಾಡುತ್ತಾರೆ.
ಅವರಿಗೆ ಹಿಂದಿನ ದಿನ ಟೋಕನ್ ಕೊಟ್ಟಿರುತ್ತಾರೆ ಆದರೆ ಇಲ್ಲಿ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ಒಬ್ಬರ ಮೇಲೊಬ್ಬರು ಬಿದ್ದು ಅಂತರವಿಲ್ಲದೆ ಟೆಸ್ಟ್ ಮಾಡಿಸಲು ಸಂತೆ ರೀತಿಯಲ್ಲಿ ಗುಂಪುಗುಂಪಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾರಿಗೆ ಪಾಸಿಟಿವ್ ಹಾಗೂ ನೆಗೆಟಿವ್ ಎಂಬುದು ತಿಳಿದಿರುವುದಿಲ್ಲ.
ಇಂಥ ಸಮಯದಲ್ಲಿ ಪೆÇಲೀಸ್ ರಕ್ಷಣೆ ಪಡೆದು ಸರತಿ ಸಾಲಿನಲ್ಲಿ ನಿಂತು ಟೆಸ್ಟ್ ಮಾಡಿಸಲು ಅವಕಾಶ ಮಾಡಿಕೊಡಬೇಕಾಗಿದೆ ಆದರೆ ಇಲ್ಲಿ ಯಲ್ಲಾ ನಿಯಮವನ್ನು ಗಾಳಿಗೆ ತೂರಿ ಟೆಸ್ಟ್ ಮಾಡಿಸಲು ನಿಂತಿರುತ್ತಾರೆ 200 ಜನದಲ್ಲಿ ಯಾರಿಗಾದರೂ ಒಬ್ಬರಿಂದ ಇನ್ನೊಬ್ಬರಿಗೆ ಕೋರೋಣ ವೈರಸ್ ಅಂಟಿದರೆ ಮುಂದಿನ ಗತಿ ಏನು? ಇದಲ್ಲದೆ ಈ ಗುಂಪಿನಲ್ಲಿ ಜ್ವರ ಕೆಮ್ಮು ತಲೆನೋವು ಇರುವವರು ಕೂಡ ನಿಂತಿದ್ದಾರೆ ಇದನ್ನು ಲೆಕ್ಕಿಸದೆ ಒಬ್ಬರ ಮೇಲೊಬ್ಬರು ಬಿದ್ದು ಮುಗಿಬೀಳುತ್ತಿದ್ದಾರೆ ಈ ಸ್ಥಳದಲ್ಲಿ ಪೆÇಲೀಸ್ ಸಹಾಯ ಪಡೆದರೆ ಮುಂದೆ ಆಗುವ ಅಂತ ಹೆಚ್ಚಿನ ಅನಾಹುತ ತಪ್ಪಿಸಬಹುದು