ದನಗಳ ಕಳ್ಳತನ ಸಿಸಿ ಕ್ಯಾಮೆರಾದಲ್ಲಿ ಸೆರೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.16: ಪಟ್ಟಣದ ಹರಪನಹಳ್ಳಿ ರಸ್ತೆಯ 4 ನೇ ವಾರ್ಡಿನಲ್ಲಿ ರಾತ್ರಿಯ ಸಮಯದಲ್ಲಿ ಕಳ್ಳರು ದನಗಳನ್ನು ಕದ್ದು ಒಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಮಲ್ಲಿಕಾರ್ಜುನ ಗೆ ಸೇರಿದ ಆಕಳೊಂದನ್ನು ತಮ್ಮ ಮನೆಯ ಮುಂದುಗಡೆ ಕಟ್ಟಿದ್ದು ಸುಮಾರು 32,000 ಬೆಲೆಬಾಳುವ ಬಿಳಿ ಬಣ್ಣದ ಆಕಳನ್ನು ಯಾರೋ ಐದು ಜನ ಕಳ್ಳರು ಬೋಲರ್ ವಾಹನವನ್ನು ತೆಗೆದುಕೊಂಡು ಬಂದು ಆಕಳನ್ನು ಹಿಡಿದುಕೊಂಡು ವಾಹನದಲ್ಲಿ ಲೋಡ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದು ಆ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ಆಕಳಿನ ಮಾಲೀಕ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ವಾಹನದ ಹಿಂದಿನ ನಂಬರ್ ಪತ್ತೆ ಹಚ್ಚಿದಾಗ ಬೆಂಗಳೂರು ಪಾಸಿಂಗ್ ದ್ದು  ಎಂದು  ತಿಳಿದು ಬಂದಿದೆ ಎಂದು ಪಿಎಸ್ಐ ತಿಳಿಸಿದರು.