
ರಾಯಚೂರು, ಏ.೨೪- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇವಸೂಗೂರು ಗ್ರಾಮದಲ್ಲಿ ಸುಕ್ಷೇತ್ರ ಆರಾಧ್ಯ ದೈವ ಶ್ರೀ ಸೂಗುರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಆರ್ಶಿವಾದವನ್ನು ಪಡೆದು ಟಿ. ನರಸಪ್ಪ ರವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಸಾವಿರಾರು ಯುವ ಮುಖಂಡರಗಳು ಕಾರ್ಯಕರ್ತರು ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ ಶಾಂತಪಣ್ಣ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ಕೆ ಪಂಪಾಪತಿ,ಶರಣಪ್ಪ ಕಲ್ಮಲಾ, ಶಾಂತ ತಾತ,ಹಂಪನಗೌಡ, ಶಂಕರಪಾಟೀಲ್, ಬಸವರಾಜ ವಕೀಲ,ಉರುಕುಂದಪ್ಪ,ಶಶಿಕಲಾ ಭೀಮರಾಯ ಹಾಗೂ ಹಿರಿಯ ಮುಖಂಡರುಗಳ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಸರಳತೆ, ಮತ್ತು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು, ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಕೈ ಬಲಪಡಿಸಿದಂತಾಗಿದೆ ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರುಗಳು, ಬ್ಲಾಕ್ ಅಧ್ಯಕ್ಷರು ಗ್ರಾ.ಪಂ ಸದಸ್ಯರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.