ದದ್ದಲ್ ಪರ ರೇವಣ್ಣ ಮತಯಾಚನೆ

ರಾಯಚೂರು,ಮೇ.೦೮- ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎನ್ ಮಲ್ಕಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್‌ರವರ ಪರ ಚುನಾವಣಾ ಬಿರುಸಿನ ಪ್ರಚಾರ ಮತ್ತು ಮತಯಾಚನೆ ನಡೆಸಿದರು.
ಕಾಂಗ್ರೆಸ್‌ನ ಹಾಲುಮತ ಸಮಾಜದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆಚ್.ಎಂ. ರೇವಣ್ಣ ರವರು ಮಾತನಾಡಿ ಇದೇ ೧೦ನೇ ತಾರೀಖು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ದದ್ದಲ್‌ರವರನ್ನು ಗೆಲ್ಲಿಸಿ ಬಸನಗೌಡ ದದ್ದಲ್‌ರವರಿಗೆ ಚಲಾಯಿಸುವ ಪ್ರತಿಯೊಂದು ಮತವೂ ಸಿದ್ದರಾಮಯ್ಯ ರವರಿಗೆ ಮತ ನೀಡಿದಂತೆ ಎಂದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿದ್ದಾರೆ, ಪ್ರತಿಯೊಂದು ಗ್ರಾಮದಲ್ಲಿ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡಿ, ನಿರಂತರವಾಗಿ ಜನರ ಮಧ್ಯೆ ಇದ್ದು ಜನರ ಸೇವಕನಾಗಿ ದುಡಿಯುತ್ತಿದ್ದಾನೆ, ೨ನೇ ಅವಧಿಗೆ ಸೇವೆ ಮಾಡಲು ಮತ್ತೊಂದು ಅವಕಾಶ ನೀಡಿ, ರಾಜ್ಯದಲ್ಲಿ ಕೂಡ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತದೆ. ರಾಯಚೂರು ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಕ್ಷೇತ್ರಕ್ಕೆ ಬೇಕಾದ ಅಗತ್ಯ ಅನುದಾನ ನೀಡಿ ಈ ಭಾಗದ ನೀರಾವರಿ ಯೋಜನೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ ಎಂದರು.
ಮಲ್ಕಪೂರ ಗ್ರಾಮದ ಜನರು ಕೋರಿದ ಸ್ವಾಗತ ತುಂಬ ಸಂತೋಷ ತಂದಿದೆ. ಈ ಭಾಗದಲ್ಲಿ ದದ್ದಲ್ ಬಸನಗೌಡ ರವರು ಗೆಲ್ಲುತ್ತಕ್ಕಂತ ಎಲ್ಲಾ ಲಕ್ಷಣಗಳು ಕಾಣುತ್ತದೆ. ಬಸನಗೌಡ ದದ್ದಲ್ ರವರು ಒಬ್ಬ ಉತ್ತಮ ವ್ಯಕ್ತಿ, ಸರಳ, ಸಜ್ಜನಿಕೆಯ ವ್ಯಕ್ತಿ, ರಾಯಚೂರು ಗ್ರಾಮೀಣ ಕ್ಷೇತ್ರದ ಜನರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಮತ್ತೊಮ್ಮೆ ಅವರನ್ನು ಗೆಲ್ಲಿಸಿ, ಇವರನ್ನು ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ, ಇವರಿಗೆ ಮತ ನೀಡಿದರೆ ಸಿದ್ದರಾಮಯ್ಯರವರಿಗೆ ಮತ ನೀಡಿದಂತೆ, ರಾಜ್ಯದ ಉದ್ದಗಲಕ್ಕೂ ಸುತ್ತಾಡಿದ್ದೇನೆ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.