ದದ್ದಲ್ ಗ್ರಾಮದಲ್ಲಿ ಅಬಕಾರಿ ದಾಳಿ ೩೧ ಪೆಟ್ಟಿಗೆ ಮದ್ಯವಶ

ಮಾನ್ವಿ,ಮಾ.೨೫- ತಾಲೂಕಿನ ರಾಯಚೂರು ಗ್ರಾಮೀಣ ಕ್ಷೇತ್ರದ ದದ್ದಲ್ ಹಾಗೂ ಹರನಹಳ್ಳಿ ಮಾರ್ಗದಲ್ಲಿ ಶುಕ್ರವಾರ ರಾತ್ರಿ ಮಾಹಿತಿಯಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ೩೧ ಪೆಟ್ಟಿಗೆ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕರಾದ ಯಮುರಪ್ಪ ಹೊಸಮನಿ ಹೇಳಿದರು.
ಶುಕ್ರವಾರ ತಡ ರಾತ್ರಿ ದದ್ದಲ್ ಪನ್ನೂರು ಹಾಗೂ ಹರನಹಳ್ಳಿ ಮಾರ್ಗ ಮದ್ಯದಲ್ಲಿ ಮದ್ಯ ಸಾಗಿಸುತ್ತಿರುವ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು ಅರಳಪ್ಪ ಹಾಗೂ ಹನುಮಂತ ನಾಯಕ ಎನ್ನುವ ಆರೋಪಗಳನ್ನು ಬಂಧಿಸಲಾಗಿದ್ದು ಅವರಿಂದ ಟಾಟಾ ಇಸಿ ವಾಹನ ಹಾಗೂ ೩೧ ಮದ್ಯ ಪೆಟ್ಟಿಗೆಯನ್ನು ವಶಪಡಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಈ ದಾಳಿಯಲ್ಲಿ ಇಲಾಖೆಯ ಅಧಿಕಾರಿಗಳಾದ ಎಚ್ ವೀರಮ್ಮ, ಶಿವಲಿಂಗ ಸ್ವಾಮಿ, ಸಿಬ್ಬಂದಿಗಳಾದ ವೆಂಕೋಬ, ಆಂಜನೇಯ,ಮೆಹಬೂಬ್, ರಸೂಲ್ ಇದ್ದರು.