ದತ್ತ ವಿಜಯಾನಂದತೀರ್ಥ ಸ್ವಾಮೀಜಿಯಿಂದ 19ನೇ ಚಾತುರ್ಮಾಸ್ಯ ವ್ರತದೀಕ್ಷೆ

ಮೈಸೂರು: ಜು.13:- ನಗರದ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮಗಳು ವಿಶೇಷವಾಗಿ ನೆರವೇರಿದವು.
ಇದೇ ವೇಳೆ ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿಯವರಿಂದ 19ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವಗಳು ಪ್ರಾರಂಭವಾದವು.
ಬೆಳಿಗ್ಗೆ 6 ಗಂಟೆಗೆ ಕಾಲಾಗ್ನಿಶಮನ ದತ್ತಾತ್ರೇಯ ಸ್ವಾಮಿಗೆ ಸುಪ್ರಭಾತ ಸೇವೆ ನೆರವೇರಿಸಿ ನಂತರ ಪವಮಾನ ಹೋಮ ಮಾಡಲಾಯಿತು.
ನಂತರ ಗುರುಪರಂಪರಾ ಪೂಜೆ, ವ್ಯಾಸ ಪೂಜೆ, ಚೈತನ್ಯಾರ್ಚನೆ ನೆರವೇರಿಸಲಾಯಿತು. ತದನಂತರ ಪವಮಾನ ಹೋಮ-ದತ್ತಹೋಮ ಪೂರ್ಣಾಹುತಿ ಮಾಡಿ ಸದ್ಗುರು ಪಾದಕಾ ಪೂಜೆ ಮಾಡಲಾಯಿತು.
ಸಂಜೆ ಶ್ರೀ ಚಕ್ರಪೂಜೆ, ಶ್ರೀ ಗುರು ಗೀತಾ ಪಾರಾಯಣ ಹಾಗೂ ಚಾತುರ್ಮಾಸ್ಯ ಪ್ರವಚನ-ವರಾಹ ಪುರಾಣ ಏರ್ಪಡಿಸಲಾಗಿದೆ. ಜುಲೈ 14ರಿಂದ ಸೆಪ್ಟೆಂಬರ್ 10ರವರೆಗೆ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ 7.30ಕ್ಕೆ ಶ್ರೀ ಚಕ್ರಪೂಜೆ, ಮಹಾಗಣಪತಿ ಹೋಮ, 8ಗಂಟೆಗೆ ಯೋಗ ವಾಸಿಷ್ಠ ಪ್ರವಚನ ನಡೆಯಲಿದ್ದು, ಸಂಜೆ 7 ಗಂಟೆಗೆ ವಿಶೇಷ ಕಾರ್ಯಕ್ರಮಗಳು ಇರಲಿವೆ.
ಅಲ್ಲದೆ ಪ್ರತಿ ಭಾನುವಾರ ಮಧ್ಯಾಹ್ನ 12ಗಂಟೆಗೆ ತೈಲಾಭಿಷೇಕ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬದ ದಿನಗಳಂದು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಭಕ್ತಾದಿಗಳು ಪಾಲ್ಗೊಳ್ಳಬಹುದಾಗಿದೆ.