ದತ್ತು ಪದ್ಮೆ ನೇಮಕ

ಕಲಬುರಗಿ,ಏ.23-ಟೋಕರಿ, ಕೋಳಿ ಸಮಾಜದ ಬಸವಕಲ್ಯಾಣ ತಾಲ್ಲೂಕ ಅಧ್ಯಕ್ಷರನ್ನಾಗಿ ದತ್ತು ಪದ್ಮೆ ಮಂಠಾಳ ಅವರನ್ನು ನೇಮಕ ಮಾಡಲಾಗಿದೆ.
ಬಸವಕಲ್ಯಾಣ ತಾಲ್ಲೂಕಿನ ತ್ರಿಪುರಾಂತದ ಜೈ ಭವಾನಿ ಮಂದಿರದಲ್ಲಿ ಸಮಾಜದ ಉಪಾಧ್ಯಕ್ಷರಾದ ರಾಮಣ್ಣ ಮಂಠಾಳೆ ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದತ್ತು ಪದ್ಮೆ ಮಂಠಾಳ ಅವರನ್ನು ಸಮಾಜದ ತಾಲ್ಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಸಮಾಜದ ಪ್ರಮುಖರಾದ ಹಣಮಂತಪ್ಪಾ ಬೊಕ್ಕೆ, ಷಣ್ಮುಖಪ್ಪ ಬೊಕ್ಕೆ, ಶಂಕರರಾವ ಜಮಾದಾರ, ಗೋವಿಂದ ಚಾಮಾಲೆ, ರಾಜಕುಮಾರ ಈರಲೆ, ನಾಗನಾಥ ಚಾಮಾಲೆ, ರಾಜಕುಮಾರ ಹೊಸಮನಿ, ರೇಖಾ ಹೊಸಮನಿ, ಮಲ್ಲಿಕಾರ್ಜುನ ಬೊಕ್ಕೆ, ಸಂಜಕುಮಾರ ಸುಣಗಾರ, ರಾಜು ಗುಂಡೆ, ದತ್ತು ಚಿಟಂಪಲ್ಲೆ, ಚಂದ್ರಕಾಂತ ಫೂಲೆ, ಪ್ರಕಾಶ ನಾಗೂರೆ, ಪುಂಡಲಿಕ ಗೊರಮುಡೆ, ತುಕಾರಾಮ ಕೊಪಟೆ, ಗುರುನಾಥ ಮೈಲಾರೆ, ಮಲ್ಲಪ್ಪಾ ಕೋಟೆ, ಸುನಿಲ ಬೊಯಿನೆ, ಸುನಿಲ ಚಾಮಾಲೆ, ಬಂಡೆಪ್ಪ ಕುಂಬಾರೆ, ಮಹಾದೇವ ಎಲ್ಲಾಪಿ, ವೆಂಕಟ ಗುಂಡುರೆ, ರಾಜು ಬೊಕ್ಕೆ, ಕಿರಣ ಪದ್ಮೆ, ಕಲ್ಲೇಶ ಉರ್ಕಿ, ದಶರಥ ಚಾಮೆ, ರಾಜಕುಮಾರ ಅವಲೆ ಸಭೆಯಲ್ಲಿ ಉಪಸ್ಥಿತರಿದ್ದರು.