ದತ್ತಿ ಪ್ರಶಸ್ತಿ  ಸಿರಾಜ್ ಬಿಸರಳ್ಳಿ ಆಯ್ಕೆ


 ಸಂಜೆವಾಣಿ ವಾರ್ತೆ
ಕೊಪ್ಪಳ, ಮಾ.08: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು  ಅಭಿಮಾನಿ ಪ್ರಕಾಶನದ ದತ್ತಿ ಪ್ರಶಸ್ತಿಗೆ  ಕೊಪ್ಪಳ ದ ಹಿರಿಯ ಪತ್ರ ಕತ೯ ಸಿರಾಜ್ ಬಿಸರಳ್ಳಿ ಆಯ್ಕೆ ಯಾಗಿದ್ದಾರೆ..   ಇದೇ ದಿ.೧೮ರಂದು ಮೈಸೂರಿನಲ್ಲಿ  ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಇದೆ. ಆರಂಭದಲ್ಲೂ ಪುಟವಿನ್ಯಾಸಕಾರರಾಗಿ ವೃತ್ತಿ ಆರಂಭಿಸಿದ  ಇವರೂ ಇದೀಗ ಚಾನಲ್ ವರದಿಗಾರ ಹಾಗೂ ನಾಲ್ಕು ದಿಕ್ಕು ಎನ್ನುವ ದೈನಿಕ ಸಂಪಾದಕರಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ.  ಪುರಸ್ಕಾರಕ್ಕೆ ಆಯ್ಕೆ ಯಾದ ಇವರಿಗೆ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಹಾಗೂ ಪದಾಧಿಕಾರಿಗಳು ಹಷ೯ ವ್ಯಕ್ತಪಡಿಸಿದ್ದಾರೆ.