ದತ್ತಿ ಕಾರ್ಯಕ್ರಮ

ಧಾರವಾಡ,ಫೆ5 : ಜಿನ' ಎಂದರೆಜಿತಎಂದರ್ಥ. ಜಿತಅಂದರೆಇಂದ್ರೀಯ ಆಸೆಗಳನ್ನು, ಅರಿಷಡ್ ವರ್ಗಗಳನ್ನು ಗೆದ್ದವನು. ಇವನನ್ನೇಜಿತೇಂದ್ರೀಯಎಂದುಕರೆಯಲಾಗುತ್ತದೆ.ಜೈನಧರ್ಮದಲ್ಲಿ ಈ ರೀತಿಯಜಿತೇಂದ್ರೀಯರನ್ನುತೀರ್ಥಂಕರರುಎಂದುಕರೆಯಲಾಗಿದೆ. ವೃಷಭ ಆದಿ, ಮಹಾವೀರಅಂತ್ಯ.ಇಪ್ಪತ್ತನಾಲ್ಕುತೀರ್ಥಂಕರರುಜೈನಧರ್ಮದಲ್ಲಿ ಆಗಿ ಹೋಗಿದ್ದಾರೆ.ಅಂತಹ ಮಹಾಚೇತನಜಿನರುಎಂದು ಭೋಧಿಸಿದ ಧರ್ಮವೇಜೈನಧರ್ಮವಾಗಿದೆಎಂದುರಾಯಚೂರಆಕಾಶವಾಣಿಯ ವಿಶ್ರಾಂತಕಾರ್ಯಕ್ರಮ ಮುಖ್ಯಸ್ಥಡಾ. ಬಿ. ಎಂ.ಶರಭೇಂದ್ರಸ್ವಾಮಿ ಹೇಳಿದರು. ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ದಿ.ಡಾ. ಶಿವಾನಂದ ಶಾಂತಪ್ಪ ಗಾಳಿ ದತ್ತಿಕಾರ್ಯಕ್ರಮದಲ್ಲಿ ನಾಡೋಜ ಹಂಪನಾ ಅವರಚಾರುವಸಂತ’ ಕಾವ್ಯದಲ್ಲಿ ಜೈನ ತತ್ವಗಳು' ವಿಷಯಕುರಿತು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, ನಾಡೋಜ ಹಂಪನಾ ಅವರು ರಚಿಸಿದಚಾರುವಸಂತ’ ಕಾವ್ಯದಲ್ಲಿಜೈನಧರ್ಮದ ತತ್ವಗಳು, ನದಿಯಂತೆ ಪ್ರವಹಿಸದೇ, ಪಾತಳಿಯ ಮಧ್ಯದಿಂದಒಸರಿದ ನೀರಿನಂತೆಇರುವುದನ್ನುಕಾಣುತ್ತೇವೆ. ಸತ್ಯ, ಅಹಿಂಸೆ, ಅಪರಿಗ್ರಹ, ಆಸ್ರೇಯ, ಬ್ರಹ್ಮಚರ್ಯಎಂದುಐದು ಅಣುವೃತಗಳ ವಿವರವನ್ನು ಪ್ರಸ್ತುತಕಾವ್ಯದಲ್ಲಿ ನಾವು ಕಾಣುತ್ತೇವೆ. ಜೈನಧರ್ಮದ ತತ್ವಗಳು ಕೇವಲ ಜೈನರಿಗೆ ಮಾತ್ರ ಸೀಮಿತಗೊಳ್ಳದೇ ಇಡೀ ಮಾನವ ಕುಲಕ್ಕೆ ಅನ್ವಯಿಸುತ್ತವೆ. ಹಾಗಾಗಿ ಜೈನಧರ್ಮ ವಿಶ್ವಧರ್ಮದ ಸಾಲಿನಲ್ಲಿ ನಿಲ್ಲುವ ಸಾಮಥ್ರ್ಯವನ್ನು ಪಡೆದಿದೆ. ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಅಧ್ಯಕ್ಷತೆ ವಹಿಸಿದ್ದ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕøತಜಿ.ಜಿ. ಲೋಬೊಗೋಳ ಮಾತನಾಡಿ, ಜೈನಧರ್ಮಕ್ಕೆ ಹತ್ತು ಪ್ರಮುಖ ಲಕ್ಷಣಗಳಿವೆ. ಕ್ಷಮಾ, ಮಾರ್ಧವ, ಆರ್ಜವ, ಶೌಚ, ಸಂಯಮ, ತಪ, ತ್ಯಾಗ, ಆಕೂಚನ್ಯ, ಬ್ರಹ್ಮಚರ್ಯಎಂದು ಅವುಗಳನ್ನು ಗುರುತಿಸಲಾಗಿದೆ. ಎಲ್ಲರೂ ಇವುಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ.ಸಮಾಜದ ಸ್ವಾಸ್ಥ್ಯ ಅಸ್ತವ್ಯಸ್ತಗೊಳ್ಳಲಾರದು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಅವರು, ಡಾ.ಶಿವಾನಂದ ಗಾಳಿ ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತುಧಾರವಾಡಜಿಲ್ಲಾ ಸಾಹಿತ್ಯ ಪರಿಷತ್ತಿನಕಟ್ಟಡ ನಿರ್ಮಾಣ, ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಅವರು ನಿರ್ವಹಿಸಿದ ಕಾರ್ಯವೈಖರಿಯನ್ನು ಸ್ಮರಿಸಿಕೊಂಡರು.
ವೇದಿಕೆ ಮೇಲೆ ಹುಬ್ಬಳ್ಳಿ-ಧಾರವಾಡ ಜೈನ ಸಾಹಿತ್ಯ-ಸಂಸ್ಕøತಿ ವೇದಿಕೆಯ ಕಾರ್ಯದರ್ಶಿ ಶಾಂತಿನಾಥ ಹೊಸಪೇಟೆ, ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ, ದತ್ತಿದಾನಿ ಶ್ರೀಮತಿ ಸುಜಾತಾಜಿನದತ್ತ ಹಡಗಲಿ ಉಪಸ್ಥಿತರಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು.ಡಾ. ಸಂಜೀವಕುಲಕರ್ಣಿ ನಿರೂಪಿಸಿ, ವಂದಿಸಿದರು.
ಶ್ರೀಮತಿ ವಸಂತಾ ಬಿಸ್ಟಣ್ಣವರ, ಶ್ರೀಮತಿ ಮಾಯಾ ದಿಂಡಲಕೊಪ್ಪ, ಶ್ರೀಮತಿ ಅನಿತಾ ಗಾಳಿ ಹಾಗೂ ಶ್ರೀಮತಿ ಮಧುಕುಲಕರ್ಣಿಜಿನಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ಡಾ.ಶೈಲಜಾಅಮರಶೆಟ್ಟಿ, ಡಾ.ಧನವಂತ ಹಾಜವಗೋಳ, ನಿಂಗಣ್ಣಕುಂಟಿ, ಡಾ.ಶಶಿಧರ ನರೇಂದ್ರ, ನೀಲಮ್ಮ ಅರವಾಳದ, ಅಶೋಕ ಬಾಗಿ ದಂಪತಿಗಳು, ಸುಭಾಷ ಪತ್ರಾವಳಿ, ಮಹಾಂತೇಶ ನರೇಗಲ್, ಶಿವಾನಂದ ಹೂಗಾರ, ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ ಸೇರಿದಂತೆ ಮುಂತಾದವರಿದ್ದರು.