
ಧಾರವಾಡ,ಮೇ9: ಕರ್ನಾಟಕ ವಿದ್ಯಾವರ್ಧಕ ಸಂಘವು ಆರ್ಥಿಕವಾಗಿ ಬಳಲುತ್ತಿರುವುದನ್ನು ತಪ್ಪಿಸಲು ಸಂಘದಕಾರ್ಯಾಧ್ಯಕ್ಷರಾಗಿದ್ದ ಪ್ರೊ. ಕೆ.ಎಸ್. ದೇಶಪಾಂಡೆ ಜೋಳಿಗೆಯನ್ನು ಹಾಕಿ ಹಣ ಸಂಗ್ರಹಿಸಿ ಸಂಘಕ್ಕೆ ಚೈತನ್ಯ ನೀಡುವಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ ಧೀಮಂತ ವ್ಯಕ್ತಿಯಾಗಿದ್ದರುಎಂದು ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ.ಕೆ.ಎಸ್. ದೇಶಪಾಂಡೆದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ`ಪ್ರೊ. ಕೆ.ಎಸ್. ದೇಶಪಾಂಡೆಅವರಜೀವನ ಹಾಗೂ ಸಾಧನೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಸಂಘಕ್ಕೆ ಮೊಟ್ಟಮೊದಲ ಬಾರಿಗೆ ಸರಕಾರದಿಂದ 50 ಸಾವಿರ ಅನುದಾನ ದೊರಕುವಂತೆ ಮಾಡಿದ ಮೊದಲಿಗರು.ಅಲ್ಲದೇ ಸಂಘದಿಂದ ಕಾನೂನುಪದ ವಿವರಣಾಕೋಶ, ಕಾರ್ಯಾಲಯ ದೀಪಿಕೆ ಪ್ರಕಟಿಸುವಯೋಜನೆ ರೂಪಿಸಿ ಅದಕ್ಕೆ ಸರಕಾರದಿಂದಅನುದಾನ ಪಡೆದು ಪ್ರಕಟವಾಗುವಂತೆ ಮಾಡಿದರು.ಅಲ್ಲದೇ ದೀರ್ಘ ಕಾಲದಿಂದ ನಿಂತು ಹೋಗಿದ್ದ ವಾಗ್ಭೂಷಣ ಪತ್ರಿಕೆಯನ್ನು 1973ರಲ್ಲಿ ಮರು ಪ್ರಾರಂಭಿಸಿದ ಕೀರ್ತಿಅವರದು.
ಫ್ಲ್ಯಾರೆನ್ ಮ್ಯಾನೇಜಿಸ್ ಹಾಗೂ ಕೋರಿಯಾ ಅಲ್ಫಾನ್ಸೊ ಅವರ ಪ್ರಭಾವಕ್ಕೆ ಒಳಗಾಗಿದ್ದ ಪ್ರೊ.ಕೆ.ಎಸ್. ದೇಶಪಾಂಡೆಯವರು ಕನ್ನಡ ಮತ್ತುಇಂಗ್ಲೀಷ ಭಾಷೆಯಲ್ಲಿ ಅಗಾಧವಾದ ಪ್ರೌಢಿಮೆಯನ್ನು ಹೊಂದಿದ್ದರು.ಈ ಎರಡೂ ಭಾಷೆಗಳಲ್ಲಿ ಅನೇಕ ಗ್ರಂಥಗಳನ್ನು ರಚಿಸಿ ಕನ್ನಡ ಹಾಗೂ ಇಂಗ್ಲೀಷ ಸಾಹಿತ್ಯ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದವರು.ಪ್ರೊ.ಕೆ.ಎಸ್. ದೇಶಪಾಂಡೆಯವರು ಮರಾಠಿಮಯವಾಗಿದ್ದಧಾರವಾಡ ಭಾಗದಲ್ಲಿಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವಲ್ಲಿ ಮಾಡಿದಕಾರ್ಯ ಸ್ಮರಣೀಯ.
ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಸುಸಜ್ಜಿತವಾಗಿ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸಿದ ಅವರು.ರಾಜ್ಯದ ಹಲವಾರು ವಿಶ್ವವಿದ್ಯಾಲಯದ ಗ್ರಂಥಾಲಯಗಳಿಗೆ ಜೀವ ನೀಡಿದವರು. ಇವರ ಸೇವೆಯನ್ನು ಗಮನಿಸಿ ಸಿ.ಡಿ. ದೇಶಮುಖರುಕೆ.ಎಸ್. ದೇಶಪಾಂಡೆಯವರು ನಿವೃತ್ತರಾಗಿದ್ದರೂ ಗುಲಬುರ್ಗಾ ವಿಶ್ವವಿದ್ಯಾಲಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮುಂತಾದ ಗ್ರಂಥಾಲಯ ಅಭಿವೃದ್ಧಿಗೆ ಹಾಗೂ ಇತರ ಅನೇಕ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಮಾರ್ಗದರ್ಶಕರಾಗಿಕಾರ್ಯನಿರ್ವಹಿಸುವಂತೆ ಆದೇಶಿಸಿದ್ದನ್ನು ಸ್ಮರಿಸಿಕೊಂಡರು.
ಖಾದಿಧಾರಿಯಾಗಿದ್ದ ದೇಶಪಾಂಡೆಯವರು ಖಾದಿಯನ್ನು ಜೀವನದ ಒಂದು ವೃತ ಅಂತಾ ತಿಳಿದು ಧರಿಸುತ್ತಿದ್ದರು. ಅಷ್ಟೇ ಅಲ್ಲ ಖಾದಿ ಉತ್ಪಾಧನೆಯ ಮಹತ್ವವನ್ನುಜನರಿಗೆ ತಿಳಿಸುತ್ತಾ ಖಾದಿ ಬಳಕೆ ಹೆಚ್ಚಾಗುವಂತೆ ಮಾಡುವಲ್ಲಿಜೀವನದುದ್ದಕ್ಕೂ ಶ್ರಮಿಸಿದವರೆಂದು ಹೇಳಿದರು.
ದತ್ತಿದಾನಿಗಳ ಪರವಾಗಿ ಮಾತನಾಡಿದ ವಿಶ್ರಾಂತ ಜಿಲ್ಲಾ ಗ್ರಂಥಾಲಯಾಧಿಕಾರಿ ಜಿ. ಬಿ. ಹೊಂಬಳ, ಕರ್ನಾಟಕ ವಿದ್ಯಾವರ್ಧಕ ಸಂಘ, ಗಾಂಧಿ ಶಾಂತಿ ಪ್ರತಿಷ್ಠಾನ, ಭಾರತೀಯ ಕುಟುಂಬ ಯೋಜನಾ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಮುಂತಾದ ಸಂಘ, ಸಂಸ್ಥೆಗಳಲ್ಲಿ ಗೌರವ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಕೆ.ಎಸ್. ದೇಶಪಾಂಡೆಯವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಭಾರತದಲ್ಲಿ ಗ್ರಂಥಾಲಯ ವೃತ್ತಿಯಲ್ಲಿಯೇ ಅತ್ಯುನ್ನತವಾದ ರಂಗನಾಥನ್-ಕೌಲಾ ಪ್ರಶಸ್ತಿ ಹಾಗೂ ಸ್ವರ್ಣಪದಕ ಸಂದಿರುವುದು ಗಮನಾರ್ಹ ಎಂದು ಅವರ ವ್ಯಕ್ತಿತ್ವ ಕುರಿತು ಭಾವನಾತ್ಮಕವಾಗಿ ಮಾತನಾಡಿದರು.
ಬಸವಪ್ರಭು ಹೊಸಕೇರಿ, ಡಾ.ಎಸ್.ಬಿ. ಪಾಟೀಲ, ಎಂ.ಎಂ.ಚಿಕ್ಕಮಠ, ಡಾ.ದಿಲೀಪ ದೇಶಪಾಂಡೆ, ಮನೋಜ ಪಾಟೀಲ, ಡಾ.ಸುರೇಶ ಹೊರಕೇರಿಇವರು ಪ್ರೊ.ಕೆ.ಎಸ್. ದೇಶಪಾಂಡೆಯವರೊಂದಿಗಿನ ತಮ್ಮ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಕೆ.ಎಸ್.ದೇಶಪಾಂಡೆಯವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಒಳ್ಳೆಯದನ್ನು ಗುರುತಿಸಿ, ಮೆಚ್ಚಿಕೊಳ್ಳುವ ದೊಡ್ಡಗುಣ ಅವರಲ್ಲಿತ್ತು.ತಮ್ಮಕಾರ್ಯ ವೈಖರಿಯ ಹಿನ್ನೆಲೆಯಲ್ಲಿ ಅವರೊಬ್ಬ ಪ್ರಾತಸ್ಮರಣೀಯ ವ್ಯಕ್ತಿಯಾಗಿದ್ದರು ಎಂದು ಹೇಳಿ, ಪ್ರೊ. ಕೆ.ಎಸ್. ನಂಜುಡಪ್ಪನವರ ಅಧ್ಯಕ್ಷತೆಯಲ್ಲಿ ಪ್ರೊ.ಕೆ.ಎಸ್. ದೇಶಪಾಂಡೆಯವರನ್ನು ಸನ್ಮಾನಿಸಿ, ಗೌರವಿಸಿದ್ದನ್ನು ನೆನಪಿಸಿಕೊಂಡರು.
ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್.ದೇಶಪಾಂಡೆಯವರ ಪತ್ನಿ ಶ್ರೀಮತಿ ಕುಸುಮಾದೇಶಪಾಂಡೆ, ಡಾ. ಆನಂದ ಪಾಟೀಲ, ನಿಂಗಣ್ಣಕುಂಟಿ, ಇಂದುಧರ ಹಿರೇಮಠ, ನಂದಿನಿ ದೇಶಪಾಂಡೆ, ಶಶಿಕಾಂತ, ಸಮೀರದೇಶಪಾಂಡೆ ಸೇರಿದಂತೆ ಕುಟುಂಬ ವರ್ಗದವರು, ವಿದ್ಯಾರ್ಥಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.