ದತ್ತಿ ಕಾರ್ಯಕ್ರಮ: ಉಪನ್ಯಾಸ

ಧಾರವಾಡ,ಜೂ.3: ಸಹಕಾರ ಸಂಘಗಳು ಸುಖಿ ಜೀವನದ ಸೋಪಾನಗಳು. ಇಲ್ಲಿ ಲಾಭಕ್ಕಿಂತ ಸೇವೆಯೇ ಮುಖ್ಯಎಂದು ನಿವೃತ್ತ ಶಿಕ್ಷಕ ಗುರುತಿಗಡಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಎಸ್. ಎಂ. ಹೊಳೆಯಣ್ಣವರ ದತ್ತಿಸಂಸ್ಮರಣೆಕಾರ್ಯಕ್ರಮದಲ್ಲಿ’ಸಹಕಾರಿ ಸಂಘಗಳು ಹಾಗೂ ನೌಕರಸ್ಥರು’ ವಿಷಯಕುರಿತುಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಸಹಕಾರಿ ಸಂಘಗಳು ಮಾನವೀಯತೆ ಹಾಗೂ ದೂರದೃಷ್ಟಿಯಿಂದ ಸದಸ್ಯರಆರ್ಥಿಕಾಭಿವೃದ್ಧಿಗಾಗಿ ಸಮಾನತೆಯ ನೆಲೆಯಲ್ಲಿಒಂದುಗೂಡಿ ನಡೆಸುವಆರ್ಥಿಕ ಸಹಾಯ, ಸ್ವಾವಲಂಭನೆ ಹಾಗೂ ಮಿತವ್ಯಯ ಸಾಧಿಸುವುದಾಗಿದೆ.ಇಂದು ಭಾರತದಲ್ಲಿ ವಿವಿಧರೀತಿಯ ಸಹಕಾರಿ ಸಂಘಗಳಿದ್ದು ಅವು ಸಹಕಾರಿ ಕಾನೂನಿನ ಚೌಕಟ್ಟಿನಲ್ಲಿಕಾರ್ಯನಿರ್ವಹಿಸುತ್ತಿವೆ.
ಭಾರತದಲ್ಲಿಯೇ ಪ್ರಪ್ರಥಮ ಸಹಕಾರಿ ಸಂಘವು 1905 ರಲ್ಲಿ ಅವಿಭಜಿತಧಾರವಾಡಜಿಲ್ಲೆಯಗದಗದ ಕಣಗಿನಹಾಳ ಗ್ರಾಮದಲ್ಲಿ ದಿ.ಸಿದ್ಧನಗೌಡ್ರು ಪಾಟೀಲರಿಂದರೈತರಿಗಾಗಿ ಪ್ರಾರಂಭಿಸಲ್ಪಟ್ಟಿತು. ದಿ. ಸಿದ್ಧನಗೌಡ್ರು ಪಾಟೀಲರು ಸಹಕಾರಿ ಸಂಘಗಳ ಪಿತಾಮಹರೆನಿಸಿಕೊಂಡರು.ಧಾರವಾಡಜಿಲ್ಲಾ ಸಹಕಾರಿ ಚಳುವಳಿಯ ತೊಟ್ಟಿಲುಎಂದುಕರೆಯಲ್ಟಟ್ಟಿತು.ಎಲ್ಲಾರೀತಿಯ ಬೆಳವಣಿಗೆ ಆಗಬೇಕಾದರೆ, ಸಹಕಾರಿ ಸಂಘಗಳ ನೌಕರರ ಹಾಗೂ ಸಂಘದ ಪದಾಧಿಕಾರಿಗಳ ನಡುವೆ ಸೌಹಾರ್ಧಯುತವಾದ ಸಮನ್ವಯತೆ, ಪ್ರೀತಿ, ವಿಶ್ವಾಸ, ಹೊಂದಾಣಿಕೆಅಗತ್ಯಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಗೃಹ ನಿರ್ಮಾಣಅಭಿವೃದ್ಧಿ ಸಹಕಾರಿ ಸಂಘದಅಧ್ಯಕ್ಷ ಪ್ರೊ.ಎಸ್. ಎಸ್. ದೇಸಾಯಿ ಮಾತನಾಡಿ, ದಿ.ಎಸ್. ಎಂ. ಹೊಳೆಯಣ್ಣವರ ಈ ನಾಡುಕಂಡಅಪ್ರತಿಮ ಶ್ರೇಷ್ಠ ಸಹಕಾರಿಗಳಾಗಿದ್ದರು. ಕುಮಾರೇಶ್ವರ ಗೃಹ ನಿರ್ಮಾಣ ಸಹಕಾರಿ ಸಂಘ ರಾಷ್ಟ್ರಮಟ್ಟದಲ್ಲಿ ಹೆಸರಾಗಲುಕಾರಣೀಕರ್ತರಾದರು.ಅವರ ಸಹಕಾರಿಜೀವನಮೌಲ್ಯ ಹಾಗೂ ಆದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕಿದೆ.ಕಾರ್ಯತತ್ಪರತೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆಇದ್ದರೆ ಮಾತ್ರ ಸಹಕಾರಿ ಸಂಘಗಳು ಉರ್ಜಿತವಾಗಲು ಸಾಧ್ಯಎಂದು ಹೇಳಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಧನವಂತ ಹಾಜವಗೋಳ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿಕುಮಾರೇಶ್ವರ ಗೃಹ ನಿರ್ಮಾಣಅಭಿವೃದ್ಧಿ ಸಹಕಾರಿ ಸಂಘದ ನಿರ್ದೇಶಕರಾದಎನ್.ಬಿ. ಗೋಲಣ್ಣವರ. ಬಿ.ಬಿ. ಭೂಮನಗೌಡರ. ಎಲ್.ಸಿ. ಕಬ್ಬೂರ.ಬಿ.ಎಚ್.ಚವಡಿ.ಎನ್.ಬಿ. ಹೂಗಾರ. ಸೀತಾ ಚಾಕಲಬ್ಬಿ. ಎಸ್.ಎಸ್. ಆನಿಕಿವಿ. ವ್ಹಿ. ಎಂ. ಸಾವಕ್ಕನವರ.ಇಂದ್ರಾಣಿಕಟ್ಟಿ. ಜಿ.ಆರ್. ಜಕ್ಕಣ್ಣವರ.ಎಂ.ಕೆ. ಅಂಗಡಿ ಹಾಗೂ ಡಾ.ಮಲ್ಲಿಕಾರ್ಜುನ ಪಾಟೀಲ, ಸಿ.ಎಸ್. ಪಾಟೀಲ, ಪ್ರೊ.ಎಸ್. ಎಂ. ಕುಂದರಗಿಸೇರಿದಂತೆಅನೇಕರು ಭಾಗವಹಿಸಿದ್ದರು.