ದತ್ತಿ ಉಪನ್ಯಾಸ

  ಸಿಂದಗಿ;ಡಿ.30: ಇಂದಿನ ತಂತ್ರಜ್ಞಾನ ಯುಗದಲ್ಲಿ ಬದಲಾಗುತ್ತಿರುವ ಸಮಾಜಕ್ಕೆ ವಚನ ಸಂಸ್ಕøತಿ ಅತ್ಯವಶ್ಯವಾಗಿದೆ ಅಂತೆಯೇ ವಚನ ಪೀತಾಮಹ ಪ.ಗು.ಹಳಕಟ್ಟಿ ಅವರ ಶ್ರಮ ಮತ್ತು ಸೃಜನಶೀಲತೆಯ ಕಾರ್ಯ ಈ ನಾಡಿಗೆ ಬಹು ದೊಡ್ಡ ಕೊಡುಗೆ ನೀಡಿತು. ಇಂದು ಈ ಸಮಾಜದಲ್ಲಿ ವಚನಗಳ ಸಂಸ್ಕøತಿ ಬೆಳೆಯಬೇಕು ಅದು ನಮ್ಮಿಂದ ಮರೆಮಾಚುತ್ತಿದೆ. ಎಂದು ಹಿರಿಯ ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.

    ಪಟ್ಟಣದ ವಿದ್ಯಾನಗರದ ಶ್ರೀ ಗುರುಪ್ರಸಾದ ಚನ್ನವೀರಪ್ಪ ಕತ್ತಿ ಅವರ ಮನೆಯಲ್ಲಿ ಸೋಮವಾರ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಲಿಂ.ಲಕ್ಕವ್ವ ಚಂದ್ರಾಮ ಸಿಂದಗಿ ಇವರ ಸ್ಮರಣಾರ್ಥ ಶ್ರೀ ಮಹಾದೇವಪ್ಪ ಸಿಂದಗಿ ಅವರ ದತ್ತಿ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡ ನಾನು ನುಡಿ ಮತ್ತು ಸಂಸ್ಕøತಿ ಬೆಳೆಯುವಲ್ಲಿ ವಚನಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಧ್ಯಾಪಕ ವ್ಹಿ.ಡಿ.ವಸ್ತ್ರದ ಹಾಗೂ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚೆನ್ನಪ್ಪ ಕತ್ತಿ ಅವರು ಮಾತನಾಡಿ, ವಚನಗಳಲ್ಲಿ ವೈಜ್ಞಾನಿಕತೆ ಇದೆ. ಪ್ರತಿ ವಚನಗಳು ನಮ್ಮಯ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿವೆ ವಚನಗಳು ನಮ್ಮ ಜೀವನದ ಬಾಗವಾದಲ್ಲಿ ನಮ್ಮಯ ನಿತ್ಯದ ಬದುಕ ಸಂತಸದಿಂದ ಕೂಡುತ್ತದೆ ಎಂದರು.

   ಈ ಸಂಧರ್ಭಲ್ಲಿ ಪ್ರಾಧ್ಯಾಪಕ ಡಿ.ಎಮ್.ಶರಶೆಟ್ಟಿ, ಶಿವಪ್ಪ ಗವಸಾನಿ, ಬಿ.ಎಸ್. ಹಣಮಶೆಟ್ಟಿ, ಡಾ. ಶರಣಬಸವ ಜೋಗೂರ, ಚನ್ನಬಸವರಾಜ ಕತ್ತಿ, ಪ್ರದೀಪ ಕತ್ತಿ, ಗುರುಪ್ರಸಾದ ಕತ್ತಿ, ಮುಕ್ತಾಯಕ್ಕ ಕತ್ತಿ, ಸೇರಿದಂತೆ ಹಲವರಿದ್ದರು.