ದತ್ತಿ ಉಪನ್ಯಾಸ ಕಾರ್ಯಕ್ರಮ

ಹೊನ್ನಾಳಿಯ ಟಿಬಿ ವೃತ್ತದ ನಿವೃತ್ತ ನೌಕರರ ಭವನದಲ್ಲಿ ತಾಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕವಿದ ಕಾರ್ಮೋಡ ಕಳಚಿತು” ಕಾದಂಬರಿ ಕರ್ತೃ ಪಿ.ಎಂ. ಸಿದ್ಧಯ್ಯ ಅವರನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ ಸನ್ಮಾನಿಸಿದರು. ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ, ಗೌರವ ಕಾರ್ಯದರ್ಶಿ ಕೆ.ಜಿ. ಕರಿಬಸಪ್ಪ, ಎಂ.ಎಸ್. ರೇವಣಪ್ಪ, ಯು.ಎನ್. ಸಂಗನಾಳಮಠ, ಶಾಂತಾದೇವಿ ಹಿರೇಮಠ ಮತ್ತು ಜಿ.ಎಂ. ಹಿರೇಮಠ ಉಪಸ್ಥಿತರಿದ್ದರು.