ದತ್ತಿ, ಉಪನ್ಯಾಸ ಕಾರ್ಯಕ್ರಮ

ಕುಂದಗೋಳ,ಜ11 : ನೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬದಲು ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಮನಕ್ಕೆ ಅತ್ಯುನ್ನತ ಆನಂದ ನೀಡುತ್ತದೆ ಎಂದು ಪ್ರಭಾರಿ ಬಿಇಒ ಎಸ್. ಎಸ್ ಬೆಳವಟಗಿ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಶಸಾಪ, ಚುಸಾಪ, ಐಕ್ಯೂಐಸಿ ಮತ್ತು ಇತಿಹಾಸ-ಪ್ರಾಚ್ಯಶಾಸ್ತ್ರ ಸಹಭಾಗಿತ್ವದಲ್ಲಿ ದತ್ತಿ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಧಾರವಾಡ ಸ.ಪ್ರ.ದ ಕಾಲೇಜು ಉಪನ್ಯಾಸಕ ಡಾ. ಗಿರೀಶ ದೇಸೂರ ಅವರು ಮಾತನಾಡಿ ನಮ್ಮ ಬದುಕು ಸುಂದರಗೊಳಿಸಲು ನಮ್ಮ ಅರಿವನ್ನು ಚದುರಿಸಿಕೊಂಡಾಗ ಜನ್ಮ ಸಾರ್ಥಕ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಗಡ್ಡಬಿಟ್ಟು ಗುಡ್ಡ ಸೇರುವುದು ಅವಶ್ಯವಿಲ್ಲ. ಬಸವಣ್ಣನಂತೆ ಸಮಾಜದ ಲ್ಲಿದ್ದುಕೊಂಡು ತನುಮನಗಳನ್ನು ಅರ್ಪಿಸುವವನೇ ನಿಜವಾದ ಶರಣ ಎಂದು 12 ನೇ ಶತಮಾನವನ್ನು ನೆನೆದರು.
ಕಲ್ಯಾಣಪುರ ಅಭಿನವ ಬಸವಣ್ಣಜ್ಜನವರು ಸಾನಿಧ್ಯವಹಿಸಿದ್ದರು. ಡಿಗ್ರಿ ಕಾಲೇಜು ಪ್ರಾಚಾರ್ಯ ಬಿ. ಎಸ್. ಶಿರಿಯಪ್ಪಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ಶಸಾಪ ಅಧ್ಯಕ್ಷ ಎಸ್. ಸಿ. ಶಾನವಾಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ-ದತ್ತಿದಾನಿಗಳು ಉಮೇಶ್ ಹೆಬಸೂರ, ಸಿ. ಬಿ. ಪಾಟೀಲ, ಮುತ್ತು ಕೊಪ್ಪದ, ತಾಲೂಕ ಚುಸಾಪ ಅಧ್ಯಕ್ಷ ವೈ. ಡಿ. ಹೊಸೂರ, ಶಸಾಪ ಗೌ. ಕಾರ್ಯದರ್ಶಿ ರಾಘವೇಂದ್ರ ನರ್ತಿ ಸೇರಿದಂತೆ ಅನೇಕರಿದ್ದರು