
ಕುಂದಗೋಳ,ಸೆ.13: ಶರಣ ಸಾಹಿತ್ಯ ಪರಿಷತ್, ಕೇಂದ್ರ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ ಮತ್ತು ಗುಡಗೇರಿ ಫಚಮ ಕಾಲೇಜು ಸಂಯುಕ್ತಾಶ್ರಯದಲ್ಲಿ ದತ್ತಿ ಸಾಹಿತ್ಯ ಉಪನ್ಯಾಸ ಫಚಮ ಕಾಲೇಜಿನಲ್ಲಿ ಜರುಗಿತು.
ತಾಲೂಕಾ ಶಸಾಪ ಅಧ್ಯಕ್ಷ ಎಸ್.ಸಿ.ಶಾನವಾಡ ಅವರು ದತ್ತಿ ಉಪನ್ಯಾಸ ಕುರಿತು ಮಾತನಾಡಿ ವಾಸ್ತವ ಬದುಕಿನ ಸತ್ಯತೆಯನ್ನು ತಿಳಿಸುವ ಪ್ರಮುಖ ಘಟ್ಟವೇ ಸಾಹಿತ್ಯವಾಗಿದ್ದು, ಪ್ರತಿಯೊಬ್ಬರೂ ಕನ್ನಡ ನಾಡು-ನುಡಿ ಗೌರವಿಸಬೇಕಿದೆ. 770 ಬಸವಾದಿ ಶರಣರು ಸಂಸತ್ತಿನ ಮೊದಲ ಗುರುಗಳಾಗಿದ್ದು, ವಚನಗಳೇ ನಮ್ಮ ಮತಿಗೆ ದಾರಿದೀಪವಾಗಿವೆ. ಎಲ್ಲರೂ ಒಂದೇ ಎಂಬ ಭಾವ ಬೆಳೆಸುವ ಸಾಹಿತ್ಯ ಒಳಗೊಂಡ ಪುಸ್ತಕಗಳನ್ನು ನಾವು ಮರೆಯುವಂತಿಲ್ಲ. ಆದರೆ ಮೊಬೈಲ್ ನಿಂದ ಇಂದು ನಮ್ಮ ಸಂಬಂಧಗಳು ಹಳಸುತ್ತಿವೆ ಎಂದು ವಿಷಾದಿಸಿದರು.
ಮುಖ್ಯೋಪಾಧ್ಯಾಯ ಸಿ. ಟಿ. ತಿಮ್ಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರಕ್ಕೆ ಮಾದರಿ ಕರ್ನಾಟಕ, ರಾಜ್ಯಕ್ಕೆ ಮಾದರಿ ಧಾರವಾಡ ಜಿಲ್ಲೆ, ಜಿಲ್ಲೆಗೆ ಮಾದರಿ ಕುಂದಗೋಳ ತಾಲೂಕು. ಇಂತಹ ಕಲೆ-ಸಾಹಿತ್ಯ, ಸಂಗೀತದ ತವರೂರನ್ನು ಎಂದೂ ಮರೆಯದಿರಿ ಎಂದು ವಿದ್ಯಾರ್ಥಿಗಳಲ್ಲಿ ಕಿವಿ ಮಾತು ಹೇಳಿದರು.
ಗುಡಗೇರಿ ಪೆÇೀಲಿಸ್ ಠಾಣಾ ಪೇದೆ ಮಂಟೂರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಶಸಾಪ ಗೌರವಾಧ್ಯಕ್ಷ ಜಿ. ಡಿ ಘೋರ್ಪಡೆ, ತಾಲೂಕು ಚುಸಾಪ ಅಧ್ಯಕ್ಷ-ಪತ್ರಕರ್ತ ವೈ. ಡಿ. ಹೊಸೂರ, ಸಾಹಿತಿ-ಪತ್ರಕರ್ತ ಎಂ. ಆರ್. ನದಾಫ, ಶಾಸಾಪ ಕಾರ್ಯಾಧ್ಯಕ್ಷ ಎಸ್. ಕೆ. ಪ್ಯಾಟಿ, ಮಸಾಪ ಅಧ್ಯಕ್ಷ, ಎಲ್. ಬಿ. ಸರಾವರಿ, ಪ್ರಾಚಾರ್ಯ ಪಿ. ಕೆ. ಕಮ್ಮಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಇದ್ದರು.
ವಿದ್ಯಾರ್ಥಿನಿ ಪ್ರತೀಕ್ಷಾ ಪ್ರಾರ್ಥಿಸಿದರು, ಶ.ಸಾ.ಪ ಉಪಾಧ್ಯಕ್ಷ ರಾಘವೇಂದ್ರ ನರ್ತಿ ನಿರೂಪಿಸಿ,ವಂದಿಸಿದರು.