ದತ್ತಿ ಉದ್ಘಾಟನಾ ಸಮಾರಂಭ

ಧಾರವಾಡ,ಮಾ7: ಹೊಸಹಳ್ಳಿಯ ಪರಮಪೂಜ್ಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳು ಭಕ್ತರ ಪಾಲಿನ ಕಾಮಧೇನು. ಅವರ ಸಾಧನೆಗಳು ಜನಮಾನಸದಲ್ಲಿ ಇನ್ನೂ ಜೀವಂತವಾಗಿವೆ ಎಂದು ಪೂಜ್ಯಜಗದ್ಗುರು ಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ತಿಳಿಸಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪರಮ ಪೂಜ್ಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳ ದತ್ತಿಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಂದುವರೆದು ಮಾತನಾಡಿದಅವರು, ಪರಮ ಪೂಜ್ಯ ಬೂದೀಶ್ವರ ಸ್ವಾಮಿಗಳು ಕಲ್ಯಾಣದಕ್ರಾಂತಿ ನಂತರಜ್ಞಾನನಿಧಿ ಚನ್ನಬಸವಣ್ಣನವರ ಮಾರ್ಗದರ್ಶನದಂತೆ ಲೋಕ ಕಲ್ಯಾಣಕ್ಕಾಗಿ ಬಸವಾದಿ ಶರಣರ ಸಂದೇಶಗಳ ಪ್ರಸಾದಕಾರ್ಯದಲ್ಲಿತೊಡಗಿದ್ದರು.770 ವರ್ಷ ಬದುಕಿದ ಶ್ರೀಗಳು ಸೂರ್ಯಚಂದ್ರರಿರುವುದು ಎಷ್ಟು ಸತ್ಯವೋಅವರು ಬದುಕಿದ್ದು ಅಷ್ಟೇ ಸತ್ಯ.ಎಲ್ಲಾಜಾತಿ ಮತದವರನ್ನು ಸಮಭಾವದಿಂದಕಂಡಓರ್ವ ಪುಣ್ಯ ಪುರುಷರು.ಶ್ರೀಗಳು ಅಂದಿನ ಸಮಾಜದ ಮೂಢ ನಂಬಿಕೆ ಖಂಡಿಸಿ ಜನರಲ್ಲಿ ವೈಜ್ಞಾನಿಕ ಸತ್ಯ ಮೂಡಿಸಿದರು.
ಬಸವಣ್ಣನವರಕಾಯಕ, ದಾಸೋಹ, ಸಮಾನತೆಯ ಸಿದ್ಧಾಂತಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು. ಬೂದೀಶ್ವರ ಶ್ರೀಗಳು ನೆನೆದವರ ಮನದಲ್ಲಿ ಸದಾವಕಾಲ ನೆಲೆಯಾಗಿರುತ್ತಾರೆ. ಮಹಾ ಹಠಯೋಗಿಗಳಾದ ಅವರ ಹೆಸರನ್ನು ನಿಡುವಣಿ ಬಂಧುಗಳು ದತ್ತಿ ಮೂಲಕ ಚಿರಸ್ಥಾಯಿಗೊಳಿಸಿದಂತೆ, ಕರ್ನಾಟಕ ವಿಶ್ವವಿದ್ಯಾಲಯದಲ್ಲೂಒಂದುಅವರ ಹೆಸರಿನಅಧ್ಯಯನ ಪೀಠ ಸ್ಥಾಪನೆಯಾಗಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮಹಾಪೌರರಾದಡಾ.ಪಾಂಡುರಂಗ ಪಾಟೀಲ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಹೆತ್ತತಂದೆ-ತಾಯಿ ನೆನೆಯದಕಾಲದಲ್ಲಿ ಪರಮ ಪೂಜ್ಯ ಬೂದೀಶ್ವರ ಶ್ರೀಗಳನ್ನು ನೆನೆಯುತ್ತಿರುವುದು ಪುಣ್ಯದಕಾರ್ಯ.ಶ್ರೀಗಳು ಬಸವ ತತ್ವದ ಪ್ರಸಾರಕರಾಗಿ ನಾಡಿನುದ್ದಕ್ಕೂ ಸಂಚರಿಸಿದರು. ಶ್ರೀಗಳು ಅಜಾತ ನಾಗಲಿಂಗ ಶ್ರೀಗಳು ಗುರು ಮಡಿವಾಳೇಶ್ವರರ ಹಾಗೂ ಸಿದ್ಧಾರೂಢರ ಸಮಕಾಲಿನರಾಗಿದ್ದು ಭಕ್ತಕೋಟಿಗೆಅಭಿಮಾನದ ಸಂಗತಿಎಂದರು.
ಅತಿಥಿಉಪನ್ಯಾಸಕರಾಗಿ ಆಗಮಿಸಿದ ವಿಶ್ರಾಂತ ಪ್ರಾಧ್ಯಾಪಕಡಾ.ಶರಣಬಸವ ವೆಂಕಟಾಪೂರಅವರು ಪರಮ ಪೂಜ್ಯ ಬೂದೀಶ್ವರರ ನೂರೆಂಟು ಪವಾಡಗಳನ್ನು ಆಧಾರ ಸಮೇತ ತಿಳಿಸಿದರು.ಜಗತ್ತುಕಂಡ ಮಹಾಶಿವಯೋಗಿಗಳಾದ ಅವರು ವಚನ ಸಾಹಿತ್ಯರಕ್ಷಕರಾಗಿ ನಾಡಿನ ಒಳಗೂ ಹಾಗೂ ಹೊರಗೂ ಬಸವಾದಿ ಶರಣರ ಸಂದೇಶ ಪ್ರತಿಯೊಬ್ಬರ ಮನೆ ಹಾಗೂ ಮನ ಮುಟ್ಟುವಂತೆ ಮಾಡಿದರುಎಂದರು.
ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿದ್ದರು.ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ದತ್ತಿದಾನಿ ಅಶೋಕ ನಿಡವಣಿ ಹಾಗೂ ಪ್ರೊ. ಡಿ.ಎಂ. ನಿಡುವಣಿ ಮಾತನಾಡಿದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಹೊರಕೇರಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.ವೇದಿಕೆಯಲ್ಲಿ ಶಂಕರ ಕುಂಬಿ ಮುಂತಾದವರಿದ್ದರು.