ದಣಿವರಿಯದ ಸಂಗಪ್ಪ ನಾವದಗೇರೆ ಬದುಕು ಸಮಾಜಕ್ಕೊಂದು ಮಾದರಿ:ಬಸವಲಿಂಗ ಪಟ್ಟದ್ದೇವರು

ಬೀದರ:ಮೇ.19:ಸಂಗಪ್ಪ ನಾವದಗೇರೆ ಉತ್ಸಾಹದ ಬುಗ್ಗೆ. ಎಪ್ಪತ್ತೈದು ವಯಸ್ಸಾದರೂ ದಣಿವರೆಯದ ಬಸವ – ಸಿರಿಧಾನ್ಯ ಸೇವಕ. ಇವರ ಜೀವನ ಸಮಾಜಕ್ಕೊಂದು ಮಾದರಿ ಎಂದು ಅನುಭವ ಮಂಟಪ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಆಶೀರ್ವಾದ ನುಡಿಗಳನ್ನಾಡಿದರು.
ಸರಕಾರಿ ನೌಕರರ ಸಮುದಾಯ ಭವನದಲ್ಲಿ ಸೂಗಮ್ಮ ಸಂಗಪ್ಪನವರ 50 ನೇ ಮದುವೆಯ ಸುವರ್ಣ ಸಂಭ್ರಾಮಾಚರಣೆ ಪ್ರಯುಕ್ತ ‘ಸಂಗಮ್ಮ ಸಿರಿ’ ಅಭಿನಂದನಾ ಗ್ರಂಥ ಹಾಗೂ ಅಮ್ಮನ ಹಾಡುಗಳು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ ಡಾ. ಬಸವಲಿಂಗ ಪಟ್ಟದ್ದೇವರು ದಂಪತಿಗಳಿಬ್ಬರು ಬಸವಜ್ಯೋತಿ ಬೆಳಗುವಲ್ಲಿ, ಎಣ್ಣೆಯಾಗಿ ಬತ್ತಿಯಾಗಿ ಸಮರ್ಪಿಸಿಕೊಂಡಿರುವದಲ್ಲದೇ ತಮ್ಮ ನಾಲ್ಕು ಮಕ್ಕಳನ್ನು ಬಸವ ತತ್ವದಡಿಯಲ್ಲಿ ಮುನ್ನಡೆಯಲು ನಾಂದಿ ಹಾಡಿದ್ದು ಇದು ಇಡೀ ಜಿಲ್ಲೆಗೊಂದು ಮಾದರಿ. ಸೂಗಮ್ಮ ನೂರಾರು ಹಾಡುಗಳು ನಿರರ್ಗಗಳವಾಗಿ ಹಾಡುವುದು ಇವರ ಕಲೆ ಪ್ರತಿಬಿಂಬಿತವಾಗಿದ್ದು. ಕಸ-ಕಡ್ಡಿ, ಹಾಳಾದ ವಸ್ತುಗಳಿಂದ ಅನೇಕ ಆಟಿಕೆ, ಸಾಮಾನುಗಳು ಕೈಯಿಂದಲೇ ಮಾಡಿ ಕೌಶಲ್ಯ ಕಾಯಕ ಪ್ರಶಸ್ತಿ ಪಡೆದಿರುವುದು ನಮಗೊಂದು ಹೆಮ್ಮೆ.
ಶಿವಶಂಕರ ಟೋಕರೆ ಸಂಪಾದಕತ್ವದಲ್ಲಿ ‘ಸಂಗಮ ಸಿರಿ’ ಅಭಿನಂದನ ಗ್ರಂಥ ಬಿಡುಗಡೆ ಗೊಳಿಸಿದ ಪ್ರೊ. ಸಿದ್ದು ಯಾಪಲಪರವಿ ಗದಗ – 50 ವರ್ಷ ನಡೆದು ಬಂದ ದಾರಿ ಒಂದು ಮೌಲ್ಯಯುತ ಗ್ರಂಥ. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತ ಪಾದರಸದಂತೆ ಓಡಾಡಿ 40 ವರ್ಷಗಳ ಬಸವ ಸೇವೆ ವರ್ಣಿಸಲು ಅಸಾಧ್ಯ. ಇವರ ಬದುಕಿನ ವೈಶಿಷ್ಟ್ಯ, ಸಂತೃಪ್ತಿ ಜೀವನದಲ್ಲಿ ಪಾಪ-ಪುಣ್ಯದ ಗೋಜಿಗೆ ಸಿಲುಕದೆ ಕಾಯಕ ದಾಸೋಹ ಜೀವನದ ಉಸಿರಾಗಿಸಿ ಕೊಂಡವರ ಸಾರ್ಥಕ ಬದುಕಿನ ಅವಲೋಕನ ಇಂದಿನ ಯುವಜನಾಂಗಕ್ಕೆ ಸಂಗಮ ಸಿರಿ ಅಭಿನಂದನ ಗ್ರಂಥ ದಿಗ್ಧರ್ಶನ.
ರಜಿಯಾ ಬಳಬಟ್ಟಿ ಸಂಪಾದಕತ್ವದ ಅಮ್ಮನ ಹಾಡುಗಳು (ಸೂಗಮ್ಮ) ಜಿಲ್ಲೆಯ ಜನಪದ ಹಾಡುಗಾರಿಕೆಯಲ್ಲಿ ಒಂದು ಮೈಲುಗಲ್ಲಾಗಲಿದೆ. ಎಂದು ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ನುಡಿದರು. ಸೂಗಮ್ಮ ತಾಯಿ ಅನಕ್ಷರತೆಯಾದರು ವಚನ, ಬೀಗರ ಹಾಡು, ಬೀಸುವ ಕುಟ್ಟುವ, ಸೋಬಾನ, ತೊಟ್ಟಿಲು ಹಾಡು, ಭಜನೆ ಹಾಡು, ಎಣ್ಣೆ ಹಚ್ಚುವ ಹಾಡುವುದು ಕರಗತ ಮಾಡಿಕೊಂಡಿದ್ದಾರೆ. ಆದರೆ ಅದನ್ನು ಸಾಹಿತ್ಯ ರೂಪಕ್ಕೆ ಅಳವಡಿಸಿ ಪುಸ್ತಕ ಹೊರ ತಂದಿರುವುದು ರಜಿಯಾ ಬಳಬಟ್ಟಿ ಅಕ್ಕನ ಸೇವೆ ಶ್ಲಾಘನೀಯ.
ಪುಸ್ತಕ ಸಂಸ್ಕøತಿ ನಲುಗುತ್ತಿರುವುದು ಇಂತಹ ಸಂದರ್ಭದಲ್ಲಿ ಸಂಗಮ ಸಿರಿ, ಅಮ್ಮನ ಹಾಡುಗಳು ಪುಸ್ತಕ ಹೊಸ ಪರಂಪರೆಗೆ ನಾಂದಿ ಹಾಡಿ ಜನಪದ ಕಲೆ ಜೀವಂತವಾಗಿಡಲು ಇದೊಂದು ಸಹಕಾರಿ. ಸತಿಪತಿಗಳೊಂದಾದ ಬದುಕು ಹಿತ್ತವಾಗಿಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ ಸೂಗಮ್ಮ ಸಂಗಪ್ಪನವರ 50 ವರ್ಷದ ಶರಣ ಸಂಸ್ಕøತಿ ದಾಂಪತ್ಯ ನಮಗೆಲ್ಲ ಆದರ್ಶ ಎಂದರು.
ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾ ಸ್ವಾಮಿಗಳು, ಸಾಯಗಾಂವದ ಶಿವಾನಂದ ಸ್ವಾಮಿಗಳು, ಡಾ. ಸಿದ್ದರಾಮ ಶರಣರು ಬೆಲ್ದಾಳ, ಗೋಕಾಕದ ಪೂಜ್ಯ ಶ್ರೀ ನೀಲಮ್ಮ ತಾಯಿ, ಬಸವಕಲ್ಯಾಣದ ಪೂಜ್ಯ ಗಾಯತ್ರಿ ತಾಯಿ ಹಾಗೂ ಬಸವ ಸೇವಾ ಪ್ರತಿಷ್ಠನದ ಡಾ. ಗಂಗಾಂಬಿಕಾ ಅಕ್ಕಾ ಸುಧೀರ್ಘವಾದ ಪೂಜಾ ಕೈಂಕರ್ಯ ನಡೆಸಿಕೊಟ್ಟು, ದಂಪತಿಗಳಿಗೆ ಗೌರವಿಸಿದರು.
ಇದೇ ಸಂಧರ್ಭದಲ್ಲಿ 50ನೇ ವರ್ಷದ ಮದುವೆ ಸಂಭ್ರಾಮಾಚರಣೆ ಸುಸಂಧರ್ಭದಲ್ಲಿ ಜಿಲ್ಲೆಯ 50 ಜನ ಸಾಹಿತಿಗಳಿಗೆ ವೇದಿಕೆ ಮೇಲೆ ಶಾಲು, ಹಾರ ನೆನಪಿನ ಕಾಣಿಕೆ ನೀಡಿ ಸಾಹಿತ್ಯ ಬಳಗಕ್ಕೆ ಗೌರವಿಸಿದರು. ಮೊದಲಿಗೆ ಬಸವರಾಜ ಬಿರಾದಾರ ಮಗಳಾದ ವಚನ ನೃತ್ಯ ಎಲ್ಲರ ಗಮನ ಸೆಳೆಯಿತು.
ಪ್ರಾರಂಭದಲ್ಲಿ ಅಲ್ಲಮಪ್ರಭು ನಾವದಗೇರೆ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಚಂದ್ರಕಲಾ ಪ್ರಭು ಡಿಗ್ಗೆ ವಂದಿಸಿದರೆ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ನವರಸ ಕಲಾವಿದರ ತಂಡ ಹಾಗೂ ನೌಬಾದೆ ಚನ್ನಬಸಪ್ಪ ವಚನ ಸಂಗೀತ ನಡೆಸಿಕೊಟ್ಟರು, ರಾಜಕುಮಾರ ಕಲಾವಿದರು ಡಾ. ರಾಜಕುಮಾರ ಧ್ವನಿಯಲ್ಲಿ ಅನೇಕ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಕೊನೆಯಲ್ಲಿ ನೂರಾರು ಅಭಿಮಾನಿ ಬಳಗದವರಿಂದ ಸೂಗಮ್ಮ ಸಂಗಪ್ಪನವರಿಗೆ ಗೌರವ ಸಲ್ಲಿಸಿದರು.