ದಣಿದವರಿಗೆ ನೀರುಣಿಸುವ ಕಾರ್ಯ ಶ್ಲಾಘನೀಯ

ದೇವದುರ್ಗ.ಏ.೦೩-ಹಸಿದವರಿಗೆ ಅನ್ನ, ದಣಿದವರಿಗೆ ನೀರುಣಿಸುವುದು ಪುಣ್ಯದ ಕೆಲಸ. ಬೇಸಿಗೆಯಲ್ಲಿ ಅರವಟಿಗೆ ಆರಂಭಿಸಿರುವುದು ಶ್ಲಾಘನೀಯ ಎಂದು ವಕೀಲ ವೆಂಕನಗೌಡ ನಾಯಕ ಹೇಳಿದರು.
ತಾಲೂಕಿನ ಜಾಲಹಳ್ಳಿಯ ಬಸ್ ನಿಲ್ದಾಣದಲ್ಲಿ ವಿದ್ಯಾಸಿರಿ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ನೀರಿನ ಅರವಟಿಕೆ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಬೇಸಿಗೆಯಲ್ಲಿ ಜನ ಮತ್ತು ಜಾನುವಾರು ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿವೆ. ಅವುಗಳ ದಾಹ ನೀಗಿಸಲು ಇಂಥ ಕಾರ್ಯಗಳು ನಡೆಯಬೇಕು ಎಂದರು.
ತಾಪಂ ಸದಸ್ಯ ಗೋವಿಂದರಾಜ ನಾಯಕ, ಚಂದಪ್ಪ ಬುದ್ದಿನ್ನಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಭೀಮರಾಯ ಮಕಾಶಿ, ಮಂಜುನಾಥ, ಅಯ್ಯಪ್ಪ ಸ್ವಾಮಿ, ಕಾಂತೇಶ, ಬಸವರಾಜ ಹಯ್ಯಾಳ, ಮಗ್ದುಮ್ ಹುಸೇನ್, ಭೀಮಶಂಕರ ಮಕಾಶಿ, ಶಿವರಾಜ ಬಿದರಾಣಿ, ರಮೇಶ್ ಅನ್ವರಿ, ಈಶಣ್ಣ ಕಾಟಮಳ್ಳಿ, ಸಲಬಣ್ಣ ಹಂಪರಗುಂದಿ, ಲಿಂಗಣ್ಣ ಮಕಾಶಿ ಇತರರಿದ್ದರು.