ದಢಾರ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಸಭೆ

ಕಲಬುರಗಿ.ಜೂ 01: ದಢಾರ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮ ಹಾಗೂ ಎಮ್.ಆರ್.ಎಲೆಮಿನೆಷನ್ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಬಗ್ಗೆ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತ್ತು.
ಅವರು ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆಗೆ ಕಾರ್ಯಕ್ರಮ ಜನೆವರಿ 2023 ರಿಂದ ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗುತ್ತದೆ. ಜ್ವರದಿಂದ ಕೂಡಿದ ಕೆಪ್ಪು ಬಣ್ಣದ ಗದ್ದೆಗಳು ಕಾಣಿಸಿಕೊಂಡಲ್ಲಿ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರ ವರದಿ ಮಾಡಿಕೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಕಡ್ಡಾಯವಾಗಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿರಂತರರಾಗಿ ನೀಡುವ 9-12 ತಿಂಗಳಿಗೆ ನೀಡುವ ದಢಾರ್ ರುಬೆಲ್ಲು ಲಸಿಕೆ ಮತ್ತು 16-24 ತಿಂಗಳ ಎರಡನೆ ಡೋಸ್ ದಡಾರ ರುಬೆಲ್ಲಾ ಲಸಿಕೆಯು ನೀಡುವುದರಿಂದ ಸಮುದಾಯಮಟ್ಟದಲ್ಲಿ 95 ಪ್ರತಿಶತಕ್ಕಿಂತ ಹೆಚ್ಚಿಗೆ ಲಸಿಕೆ ಗುರಿ ಹೊಂದಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದರು.
ಅದೇ ರೀತಿಯಾಗಿ ಕುಷ್ಠರೋಗ ಪತ್ತೆ ಹಚ್ಚು ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವೈದ್ಯಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಇದೇ ಜೂನ್ 19 ರಿಂದ ಜುಲೈ 6 ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಅಂದೋಲನದಲ್ಲಿ ಭಾಗವಹಿಸುವರು ಎಂದು ಸಭೆಯಲ್ಲಿ ತಿಳಿಸಿದರು.
ಒಟ್ಟು ಜಿಲ್ಲೆಯಾದ್ಯಂತ ಜನಸಂಖ್ಯೆ 291948, ಜಿಲ್ಲಾ ಆಸ್ಪತ್ರೆ 01, ತಾಲೂಕು ಆಸ್ಪತ್ರೆ 6, ಸಮುದಾಯ ಆರೋಗ್ಯ ಕೇಂದ್ರ 16,ಪ್ರಾಥಮಿಕ ಆರೋಗ್ಯ ಕೇಂದ್ರ 96, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ 15, ಉಪಕೇಂದ್ರಗಳು, 339, ಹಳ್ಳಿಗಳು 1223, ಒಟ್ಟು ಸ್ಲಮ್ ಜನಸಂಖ್ಯೆ 101682, ಅಂಗವಾಡಿ ಕಾರ್ಯಕರ್ತರು 3132, ಸರಕಾರಿ ಶಾಲೆ,ಪ್ರರ್ವೇಟ್ ಸ್ಕೂಲ್,1031, ಜಿಲ್ಲೆಯಾದ್ಯಂತ ಹಾಸ್ಟಲ್ 185 ಕಾಲೇಜ್ 200 ಕಾರ್ಯನಿರ್ವಹಿಸುತ್ತವೆ ತಂಡಗಳು, ಸೂಪರವೈಜರ್, ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ಅಂದೋಲನ ಅವಧಿಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ತಪಾಸಣಾ ಹಾಗೂ ಮೇಲ್ವಿಚಾರಣ ತಂಡಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಮಕ್ಕಳಿಗೆ ಕುಷ್ಠರೋಗ ಮಾಹಿತಿಯನ್ನು ತಿಳಿಸಲಾಗುವುದು. ಈಗಾಗಲೇ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಕುಷ್ಠರೋಗ ಅಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ಸಭೆಯಲ್ಲಿ ತಿಳಿಸಿದರು.
ಮನೆ ಮನೆ ಭೇಟಿ ಒಂದು ತಂಡದಲ್ಲಿ ಇಬ್ಬರು ಸದಸ್ಯರು ಇರುತ್ತಾರೆ, ತಂಡದಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಇರುತ್ತಾರೆ, ಮೈಮೇಲಿನ ಯಾವುದಾದರೂ ಮಚ್ಚೆ ಮತ್ತು ಇತರೆ ಲಕ್ಷಣದ ಬಗ್ಗೆ ವಿಚಾರಿಸುವುದು ಒಂದು ತಂಡ ಗ್ರಾಮೀಣ ಪ್ರದೇಶದಲ್ಲಿ 15 ರಿಂದ 20 ನಗರ ಪ್ರದೇಶದಲ್ಲಿ 20 ರಿಂದ 25 ಮನೆಗಳು ಸಮೀಕ್ಷೆ ಮತ್ತು ಪರೀಕ್ಷೆ ಮಾಡುವರು ಎಂದು ಸಭೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಂದ ಕುಷ್ಠರೋಗದ ಪತ್ತೆ ಹಚ್ಚುವ ಆಂದೋಲನದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಎಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್,ಕ್ಷಯರೋಗ ನಿರ್ಮೂಲ ಅಧಿಕಾರಿ ಡಾ.ಚಂದ್ರಕಾಂತ ನರಿಬೋಳಿ, ಡಾ. ಅನಿಲ್ ತಾಳಿಕೋಟ್ ಸೇರಿದಂತೆ ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ತಾಲೂಕುಮಟ್ಟದ ವೈದ್ಯಾಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.