ದಟ್ಟ ಮಂಜು ಹಿನ್ನೆಲೆ: ಉತ್ತರ ಭಾರತದಲ್ಲಿ ರೈಲು ಸಂಚಾರ ವ್ಯತ್ಯಯ

ನವದೆಹಲಿ,ಜ.17- ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಮಂಜು ಮತ್ತು ಮಂಜಿನ ದಟ್ಟವಾದ ಹೊದಿಕೆಗಳು ಹರಡಿದ್ದರಿಂದ ಉತ್ತರ ರೈಲ್ವೆಯ ಕನಿಷ್ಠ 15 ರೈಲು ಸಂಚಾರ ವಿಳಂಬವಾದ ಘಟನೆ ನಡೆದಿದೆ.

ಈ ರೈಲುಗಳು ರಾಷ್ಟ್ರ ರಾಜಧಾನಿ ಮತ್ತು ನೆರೆಯ ರಾಜ್ಯಗಳಿಗೆ ಆಗಮಿಸುವ ನಿಗದಿತ ಸಮಯಕ್ಕಿಂತ 8 ಗಂಟೆಗಳಷ್ಟು ತಡವಾಗಿ ಸಂಚಾರ ಮಾಡಿದ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸಫ್ದರ್‍ಜಂಗ್ ಮತ್ತು ಪಾಲಂ ಕ್ರಮವಾಗಿ 4.6 ಡಿಗ್ರಿ ಮತ್ತು 6.0 ಡಿಗ್ರಿ ಸೆಲ್ಸಿಯಸ್‍ನ ಕನಿಷ್ಠ ತಾಪಮಾನ ದಾಖಲಾಗಿತ್ತು. ರಾಷ್ಟ್ರ ರಾಜಧಾನಿ ಮತ್ತೊಂದು ಬೆಳಿಗ್ಗೆ ನಡುಗುವ ಚಳಿಗೆ ಸಾಕ್ಷಿಯಾಯಿಗೆ. ಇದರಿಂದ ದಟ್ಟವಾದ ಮಂಜಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‍ಪ್ರೆಸ್,ಗಯಾ-ನವದೆಹಲಿ ಮಹಾಬೋಧಿ ಎಕ್ಸ್‍ಪ್ರೆಸ್, ಬರೌನಿ-ಹೊಸದಿಲ್ಲಿ ಕ್ಲೋನ್ ವಿಶೇಷ , ಗೋರಖ್‍ಪುರ-ಭಟಿಂಡಾ ಗೋರಖ್‍ಧಾಮ್ ಎಕ್ಸ್‍ಪ್ರೆಸ್, ಹೌರಾ -ನವದೆಹಲಿ ಪೂರ್ವ ಎಕ್ಸ್‍ಪ್ರೆಸ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಅಮೃತಸರ ಎಕ್ಸ್‍ಪ್ರೆಸ್,ಕಾಮಾಖ್ಯ-ದೆಹಲಿ ಬ್ರಹ್ಮಪುತ್ರ ಮೇಲ್ , ರಾಯ್‍ಗಢ-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ ಎಕ್ಸ್‍ಪ್ರೆಸ್ , ವಿಶಾಖಪಟ್ಟಣಂ-ಹೊಸದಿಲ್ಲಿ ಆಂಧ್ರಪ್ರದೇಶ ಎಕ್ಸ್‍ಪ್ರೆಸ್ ರೈಲು ಸಂಚಾರದಲ್ಲಿ ವಿಳಂಬವಾಗಿದೆ.

ರಾಯಗೀರ್-ನವದೆಹಲಿ ಶ್ರಮಜೀವಿ ಎಕ್ಸ್‍ಪ್ರೆಸ್ , ರಕ್ಸೌಲ್ -ಆನಂದ್ ವಿಹಾರ್ ಟರ್ಮಿನಲ್ ಸದ್ಭಾವನಾ ಎಕ್ಸ್‍ಪ್ರೆಸ್, ಜಬಲ್‍ಪುರ-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ , ಡಾ ಅಂಬೇಡ್ಕರ್ ನಗರ- ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮಾಲ್ವಾ ಎಸ್‍ಎಫ್ ಎಕ್ಸ್‍ಪ್ರೆಸ್ , ಎಂಜಿಆರ್ ಚೆನ್ನೈ ಸೆಂಟ್ರಲ್ -ನವದೆಹಲಿ ಗ್ರ್ಯಾಂಡ್ ಟ್ರಂಕ್ ಎಕ್ಸ್‍ಪ್ರೆಸ್ , ಎಂಜಿಆರ್ ಚೆನ್ನೈ ಸೆಂಟ್ರಲ್ -ನವದೆಹಲಿ ತಮಿಳುನಾಡು ಎಕ್ಸ್‍ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬಾರಿ ವ್ಯತ್ಯಯವಾಗಿದೆ.

ಪ್ರಯಾಣಿಕರ ಪರದಾಟ:

ರೈಲುಗಳು ತಡವಾಗಿ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾದು ಪ್ರಯಾಣಿಕರು ಪರದಾಡುವಂತಾಗಿದೆ. ರೈಲು 4 ಗಂಟೆ ತಡವಾಗಿ ಚಳಿಯಲ್ಲಿ ಪರದಾಡುತ್ತಿದ್ದೇವೆ.. ಕೇಳುವವರು ಯಾರೂ ಇಲ್ಲ. ಸಮಸ್ಯೆಗಳಿಗೆ ಸರಕಾರ ಕ್ರಮ ಕೈಗೊಳ್ಳಬೇಕು,” ಎಂದು ಪ್ರಯಾಣಿಕರೊಬ್ಬರು ತಮ್ಮ ಅತೃಪ್ತಿ ಅಸಮಾಧಾನ ಹೊರಹಾಕಿದ್ದಾರೆ

ಬಿಹಾರಕ್ಕೆ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ರೈಲಿನ ಸಮಂiÀ ಮರುಹೊಂದಿಸಲು ಹೆಣಗಾಡಿದ್ದರಿಂದ ಅವರ ರೈಲು ಬರಲು 2 ಗಂಟೆ ತಡವಾಯಿತು ಎಂದು ಹೇಳಿದ್ದಾರೆ.