ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 40 ಕೋಟಿ ಅನುದಾನದಲ್ಲಿ ಕಾಮಗಾರಿ

ದಾವಣಗೆರೆ.ಮಾ.೨೦: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಕ್ಕೆ ರಾಜ್ಯ ಸರ್ಕಾರದಿಂದ 40 ಕೋಟಿ ರೂ. ವಿಶೇಷ ಅನುದಾನ ತರುವಲ್ಲಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಯಶಸ್ವಿಯಾಗಿದ್ದು,  ಗ್ರಾಮಾಂತರ ಪ್ರದೇಶದಲ್ಲಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.ಗ್ರಾಮಾಂತರ ಪ್ರದೇಶದ ತರಳಬಾಳು ನಗರ, ಜವಳಘಟ್ಟ, ಕೈದಾಳ್, ಕುಕ್ಕವಾಡ ಹಾಗೂ ಕನಗೊಂಡನಹಳ್ಳಿ ಗ್ರಾಮಗಳಲ್ಲಿ 40 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ನಂತರ ಗ್ರಾಮಾಂತರ ಪ್ರದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ರಾಜ್ಯ ಸರ್ಕಾರದಿಂದ ಕಳೆದ 3 ತಿಂಗಳ ಹಿಂದೆ 20 ಕೋಟಿಗಳ ವಿಶೇಷ ಅನುದಾನ ತಂದು ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದೀಗ 40 ಕೋಟಿ ವಿಶೇಷ ಅನುದಾನ ತಂದು ಗ್ರಾಮಾಂತರ ಪ್ರದೇಶಗಳ ರಸ್ತೆಗಳನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ ಎಂದರು.ಕ್ಷೇತ್ರದ ಗ್ರಾಮಾಂತರ ಪ್ರದೇಶದ ತರಳಬಾಳು ನಗರ, ಜವಳಘಟ್ಟ, ಕೈದಾಳ್, ಕುಕ್ಕವಾಡ ಹಾಗೂ ಕನಗೊಂಡನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಮತ್ತೊಂದು ಹೆಸರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ರೀತಿಯಲ್ಲೂ ಅಭಿವೃದ್ದಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿದೆ ಎಂದರು.ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಸಿ.ನಿಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಆರನೇಕಲ್ಲು ಮಂಜಣ್ಣ, ಕುಕ್ಕವಾಡ ಕೆ.ಎನ್. ಮಂಜುನಾಥ, ಕುಕ್ಕವಾಡ ಡಿ. ಮಲ್ಲೇಶಪ್ಪ, ಶಿರಮಗೊಂಡನಹಳ್ಳಿ ಎಸ್.ಎಂ. ರುದ್ರೇಶ್, ಹನುಮಂತಪ್ಪ, ಹದಡಿ ಮಾಲತೇಶ್, ಹೊಸಳ್ಳಿ ಗಿರೀಶ್, ಜಂಭು, ಕನಗೊಂಡನಹಳ್ಳಿಯ ಪರಮೇಶ್ವರಪ್ಪ, ದೊಡ್ಡಪ್ಪ, ಕರಿಬಸಪ್ಪ, ಹದಡಿ ರಮೇಶ್, ಬಲ್ಲೂರು ಬಸವರಾಜ್, ಚಿಕ್ಕಣ್ಣ, ಕುಕ್ಕವಾಡ ಕೆ.ಟಿ.ಹನುಮೇಗೌಡ, ಡಿ.ಬಿ.ಶಂಕರ್, ರಾಜು ಎ.ಎಸ್., ಲಿಂಗೇಶ್ ಕೆ., ಪರಮೇಶ್ವರಯ್ಯ, ನಂದಿಗೌಡ ಕೆ.,ತಿಪ್ಪೇಸ್ವಾಮಿ, ಜವಳಘಟ್ಟದ ರಾಮಪ್ಪ, ಹನುಮಂತಪ್ಪ, ಕೆಆರ್‍ಐಡಿಎಲ್‍ನ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶಬಾಬು, ಗ್ರಾಮ ಪಂಚಾಯ್ತಿ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.