ದಕ್ಷಿಣ ವಲಯ 2 ಟೈಕ್ವಾಂಡೊ ಟೂರ್ನಾಮೆಂಟ್‍ಗೆ ಚಾಲನೆ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಅ20 : ಪ್ರತಿಷ್ಠಿತ ಕಲ್ಪವೃಕ್ಷ ಮಾದರಿ ಶಾಲೆ ಹಾಗೂ ಸಿ.ಬಿ.ಎಸ್.ಇ. ನವದೆಹಲಿ ಇವರ ಜಂಟಿ ಸಹಯೋಗದಲ್ಲಿ ದಕ್ಷಿಣ ವಲಯ 2 (ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳ) ಟೈಕ್ವಾಂಡೊ ಟೂರ್ನಾಮೆಂಟ್‍ಗೆ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಡಳಿತ ಮಂಡಳಿಯ ಸದಸ್ಯ ಹೇಮಂತ ಕಿತ್ತೂರ ಮಾತನಾಡಿ, ಕಲ್ಪವೃಕ್ಷ ಮಾದರಿ ಶಾಲೆಯ ಸಹಯೋಗದಲ್ಲಿ ದಕ್ಷಿಣ ವಲಯ-2 ಟೂರ್ನಾಮೆಂಟ್ ಬೈಲಹೊಂಗಲದಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಕ್ರೀಡಾಮನೋಭಾವನೆಯನ್ನು ಹೆಚ್ಚಿಸಿಕೊಳ್ಳಬೇಕೆಂದರು. ಸಂಸ್ಥೆಯ ಅಧ್ಯಕ್ಷರಾದ ಮಂಗಲಾ ಢಮ್ಮಣಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಚಾರ್ಯ ಹನಮೇಶ ದುಡ್ಯಾಳ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಿ.ಬಿ.ಎಸ್.ಇ. ವೀಕ್ಷಕ ಡಾ.ದುರೈ ಸಿ., ಸಿ.ಬಿ.ಎಸ್.ಇ. ತಾಂತ್ರಿಕ ಪ್ರತಿನಿಧಿ ಕೊದಂಡನ್, ಟೂರ್ನಾಮೆಂಟ್ ನಿರ್ದೇಶಕ ಶ್ರೀಪಾಆದ ರಾವ್ ವೇದಿಕೆಯಲ್ಲಿದ್ದರು.ಆಡಳಿತ ಮಂಡಳಿ ಸದಸ್ಯ ದಿನಕರ ಜೋಶಿ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ದೈಹಿಕ ಶಿಕ್ಷಕ ಸಂತೋಷ ವನಕಿ, ನಾಲ್ಕು ರಾಜ್ಯಗಳ ಸಿ.ಬಿ.ಎಸ್.ಇ. ಶಾಲೆಗಳ ಟೈಕಾಂಡೊ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಿಂದ ನಡೆದ ಆಕರ್ಷಕ ಭರತನಾಟ್ಯ ನೋಡುಗರ ಗಮನ ಸೆಳೆಯಿತು. ವಿಜಯಲಕ್ಷ್ಮಿಮುಮ್ಮಿಗಟ್ಟಿ ಸ್ವಾಗತಿಸಿದರು. ದೀಪಿಕಾ ಬಂಢಾರಿ ನಿರೂಪಿಸಿದರು. ಉಮಾ ಕೋಲಾರ ವಂದಿಸಿದರು.