ದಕ್ಷಿಣ ಭಾರತಕ್ಕೆ ೨ನೇ ವಂದೇ ಭಾರತ್ ಎಕ್ಸ್‌ಪ್ರೆಸ್

ಅಮರಾವತಿ, ನ.೧೭- ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತದ ಅತಂತ್ಯ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಶೀಘ್ರವೇ ಲಭ್ಯವಾಗುವ ಸಾಧ್ಯತೆ ಇದೆ.ಈ ಸೆಮಿ ಹೈಸ್ಪೀಡ್ ಎಲೆಕ್ಟ್ರಿಕ್ ರೈಲು ಪ್ರಸ್ತಾವಿತ ಮಾರ್ಗದಲ್ಲಿ ಸುಮಾರು ೬ ಗಂಟೆಗಳ ಕಾಲ ಪ್ರಯಾಣದ ಸಮಯವನ್ನು ಕಡಿತ ಮಾಡಲಿದೆ ಎನ್ನಲಾಗಿದೆ.ವಿಜಯವಾಡದ ಮೂಲಕ ವಿಶಾಖಪಟ್ಟಣಂ ಮಾರ್ಗ ಸಿಕಂದರಾಬಾದ್ ಮಾರ್ಗಕ್ಕೆ ನೀಡಲಾಗುತ್ತಿರುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜನ್ಮಭೂಮಿ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ.ಹಿಂದಿನ ಹನ್ನೆರಡರಿಂದ ೧೨, ೧೪ ಗಂಟೆಗಳಿಗೆ ಹೋಲಿಸಿದರೆ ಪ್ರಯಾಣಿಕರು ವಿಶಾಖಪಟ್ಟಣಂನಿಂದ ಪ್ರಯಾಣಿಕರು ಈಗ ೮ ಗಂಟೆಗಳಲ್ಲಿ ಸಿಕಂದರಾಬಾದ್ ತಲುಪಬಹುದಾಗಿದೆ.
ಇನ್ನೂ, ವಿಶಾಖಪಟ್ಟಣಂನಿಂದ ವಿಜಯವಾಡದ ಮೂಲಕ ಸಿಕಂದರಾಬಾದ್‌ಗೆ ರೈಲಿನ ನಿಖರವಾದ ಮಾರ್ಗವನ್ನು ರೈಲ್ವೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಆದರೆ ಇದು ಆರಂಭದಲ್ಲಿ ವೈಜಾಗ್ ಮತ್ತು ವಿಜಯವಾಡ ನಡುವೆ ಚಲಿಸುತ್ತದೆ ಹಾಗೂ ನಂತರ ಸಿಕಂದರಾಬಾದ್‌ಗೆ ಸಂಪರ್ಕಿಸುತ್ತದೆ ಎಂದು ಮೂಲಗಳು ಹೇಳುತ್ತಿವೆ.