ದಕ್ಷಿಣ ಭಾಗದ ಬೇಡಿಕೆ ಪೂರ್ಣಗೊಳಿಸಲು ಮುಂದಾಗ ಬೇಕಾಗಿದೆ

ಕೋಲಾರ,ನ,೫-ಗ್ರಾಮೀಣ ಭಾಗದ ಯುವಕರು ಸ್ವಯಂ ಉದ್ಯೋಗದ ಸ್ವಾವಲಂಭಿಗಳಾಗಲು ಪೂರಕವಾದ ಕೌಶಲ್ಯ ತರಭೇತಿಗಳನ್ನು ಪಡೆದು ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುವಂತಾಗ ಬೇಕು. ಫಸ್ಟ್ ಸರ್ಕಲ್ ಸಂಸ್ಥೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ದಿ ಉದ್ಯೋಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿರುವಂತ ಉದ್ಯೋಗ ಮೇಳವನ್ನು ಸದ್ವಳಿಸಿ ಕೊಳ್ಳ ಬೇಕೆಂದು ಕರ್ನಾಟಕ ಮಾರಿಟೈಮ್ ಬೋರ್ಡ್‌ನ ಸಿ.ಇ.ಓ. ಜಯರಾಮ್ ರಾಯ್ ಪುರಿ ಕರೆ ನೀಡಿದರು,
ನಗರದ ನಗರದ ಸರ್ಕಾರಿ ಪ್ರಥಮದರ್ಜೆ ಬಾಲಕರ ಪದವಿ ಕಾಲೇಜಿನಲ್ಲಿ ಫಸ್ಟ್ ಸರ್ಕಲ್ ಸಂಸ್ಥೆ, ಕರ್ನಾಟಕ ಕೌಶಲ್ಯ ಅಭಿವೃದ್ದಿ ಉದ್ಯೋಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದ ಉದ್ಘಾಟನ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳಾಡಿ ಕೃಷಿ ಭೂಮಿಯನ್ನು ನಂಬಿ ಎಲ್ಲರೂ ಜೀವನ ನಿರ್ವಾಹಣೆ ಸಾಧ್ಯವಿಲ್ಲ ದಕ್ಷಿಣ ಕರ್ನಾಟಕ ಬೇಡಿಕೆಗಳನ್ನು ಪೂರ್ಣ ಮಾಡುವ ಕಾರ್ಯಕ್ರಮವನ್ನು ನಾವುಗಳ ಮಾಡ ಬೇಕಾಗಿದೆ. ಉದ್ಯಮಗಳಿಗೆ ಪೂರಕವಾದ ಶೈಕ್ಷಣಿಕ ಕೌಶಲ್ಯ ತರಬೇತಿಗಳ ಅಗತ್ಯವಿದೆ ಬೇರೆಯವರಿಗೆ ಅವಕಾಶ ನೀಡದೆ ನಾವುಗಳೇ ಸದ್ಬಬಳಿಸಿ ಕೊಳ್ಳ ಬೇಕು. ಮುಂದಿನ ದಿನಗಳಲ್ಲಿ ಅನುಭವದ ಅಧಾರದ ಮೇಲೆ ಸ್ವಯಂ ಉದ್ಯೋಗಕ್ಕೆ ಅನುವುಂಟಾಗುವುದು ಎಂದು ತಿಳಿಸಿದರು, ಉದ್ಯೋಗದ ಅವಕಾಶ ಮನೆ ಬಾಗಿಲಿಗೆ ಡಿಸಿ ಅಕ್ರಂಪಾಷ ಮಾತನಾಡಿ ಬೇಡಿಕೆಗೆ ತಕ್ಕಂತೆ ಆರ್ಹರಾದ ಉದ್ಯೋಗಿಗಳನ್ನು ಪೂರೈಸಲು ಇಂಥಹ ಉದ್ಯೋಗ ಮೇಳಗಳು ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು,
ತಾಂತ್ರಿಕ ಶಿಕ್ಷಣ ಪಡೆದವರಿಗೆ ಬೇರೆ ಕಡೆ ಆಯ್ಕೆ ಮಾಡಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯವಾಗಿ ಕೈಗಾರಿಗಳು ಪ್ರಥಮವಾಗಿ ಕನ್ನಡಿಗರನ್ನು ಹಾಗೂ ದ್ವಿತೀಯವಾಗಿ ಸ್ಥಳೀಯರಿಗೆ ಅದ್ಯತೆ ನೀಡಲು ಕೈಗಾರಿಕೆಗಳ ಆಡಳಿತ ಮಂಡಳಿಗೆ ಈಗಾಗಲೇ ಸೂಚಿಸಲಾಗಿದ್ದು, ಅದಕ್ಕೆ ಆಡಳಿತ ಮಂಡಳಿಯು ಸಮ್ಮತಿಸಿದೆ. ಸ್ಥಳೀಯರು ಉದ್ಯೋಗ ಅರಿಸಿ ಬೇರೆ ಕಡೆ ಹೋದರೆ ಸ್ಥಳೀಯವಾಗಿ ಅಭಿವೃದ್ದಿಗೆ ಕೊರತೆಯಾಗುವ ಹಿನ್ನಲೆಯಲ್ಲಿ ಸ್ಥಳೀಯರಿಗೆ ಅದ್ಯತೆ ನೀಡುವುದು ಅವಶ್ಯಕವಿದೆ ಎಂದು ಅಭಿಪ್ರಾಯ ಪಟ್ಟರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಗೌಡ ಮಾತನಾಡಿ ಕಾಲೇಜಿಗೆ ಅಡಿಟೋರಿಯಂ ಜೂತೆಗೆ ಕಾಲೇಜಿನ ಹಳೆಯ ಕಟ್ಟಡಗಳ ದುರಸ್ಥಿಯಾಗ ಬೇಕಾಗಿದೆ ಎಂದು ಮನವಿ ಮಾಡಿದರು.
ಅಧ್ಯಾಪಕ ಮುರಳಿ ಮಾತನಾಡಿದರು, ಫಸ್ಟ್ ಸರ್ಕಲ್ ಸಂಸ್ಥೆಯ ನಿರ್ದೇಶಕ ಅಂಬರೀಷ್ ಹಾಗೂ ಅಧ್ಯಾಪಕಿ ಉಮ, ಚನ್ನಬಸಪ್ಪ ಉಪಸ್ಥಿತರಿದ್ದರು. ಡಾ.ಶಂಕರಪ್ಪ ಸ್ವಾಗತಿಸಿದರು, ಶ್ರೀನಿವಾಸ್ ವಂದಿಸಿದರು, ವಿದ್ಯಾರ್ಥಿ ವೆಂಕಟೇಶ್ ಪ್ರಾರ್ಥಿಸಿದರು.