ದಕ್ಷಿಣ ಪೂರ್ವ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವ:ಗುಲಬರ್ಗಾ ವಿವಿ ಸಾಂಸ್ಕøತಿಕ ತಂಡ

ಕಲಬುರಗಿ:ಫೆ.20: ದಕ್ಷಿಣ ಪೂರ್ವ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಭಾಗವಹಿಸಲು ಗುಲಬರ್ಗಾ ವಿಶ್ವವಿದ್ಯಾಲಯದ ಸಾಂಸ್ಕøತಿಕ ತಂಡವನ್ನು ಆಯ್ಕೆ ಮಾಡಲಾಯಿತು.
ಮೈಸೂರಿನ ಜೆಎಸ್‍ಎಸ್ ಕಾಲೇಜಿನಲ್ಲಿ ಫೆ.22 ರಿಂದ 26 ರವರೆಗೆ ನಡೆಯಲಿರುವ ದಕ್ಷಿಣ ಪೂರ್ವ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವ ಸಂಭ್ರಮದಲ್ಲಿ ಭಾಗವಹಿಸಲು ಗುಲಬರ್ಗಾ ವಿಶ್ವವಿದ್ಯಾಲಯ 54 ವಿದ್ಯಾರ್ಥಿಗಳು (ವಿದ್ಯಾರ್ಥಿ 24, ವಿದ್ಯಾರ್ಥಿನಿಯರು 17 ಹಾಗೂ ಸಹಕಲಾವಿದರ 10 ಇವರನ್ನೊಳಗೊಂಡ ತಂಡ ತೆರಳಲಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಸಾಂಸ್ಕøತಿಕ ತಂಡದ ವ್ಯವಸ್ಥಾಪಕರಾಗಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಮಾಧುರಿ ಹಾಗೂ ದೃಶ್ಯಕಲಾ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ. ಸೈಯದ್ ಪಾಷಾ ಇವರು ಪಾಲ್ಗೊಳ್ಳಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ. ಪ್ರೊ. ದಯಾನಂದ ಅಗಸರ, ಕುಲಸಚಿವ ಡಾ. ಬಿ. ಶರಣಪ್ಪ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕøತಿಕ ಸಂಯೋಜಕ ಪ್ರೊ. ಕೆ. ಲಿಂಗಪ್ಪ ತಂಡಕ್ಕೆ ಶುಭ ಹಾರೈಸಿದ್ದಾರೆ.