ದಕ್ಷಿಣ ಕ್ಷೇತ್ರ:2480 ಜನರಿಂದ ಅಂಚೆ ಮತದಾನ

ಕಲಬುರಗಿ,ಮೇ 3: ನಗರದ ಇಂದಿರಾ ಸ್ಮಾರಕಭವನದಲ್ಲಿ ಇಂದು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಚೆ ಮತದಾನ ಪ್ರಕ್ರಿಯೆ ಜರುಗಿತು.ಸುಮಾರು 2480 ಜನ ನೋಂದಾಯಿತ ಮತದಾರರು ಮತದಾನ ಮಾಡಿದರು.
ಮತದಾನ ದಿನವಾದ ಮೇ 10 ರಂದು ಅಗತ್ಯ ಸೇವಾವಲಯದಲ್ಲಿ ಕರ್ತವ್ಯದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾರ್ಯನಿರತ ಪತ್ರಕರ್ತರು ಅಂಚೆ ಮತದಾನ ಮಾಡಿದರು.
ನಿನ್ನೆಯಿಂದ ಆರಂಭವಾದ ಅಂಚೆ ಮತದಾನ ಪ್ರಕ್ರಿಯೆ ನಾಳೆ ಕೊನೆಗೊಳ್ಳಲಿದೆ.ಆಯಾ ವಿಧಾನಸಭಾ ಕ್ಷೇತ್ರದ ಆರ್‍ಒ ಕಚೇರಿಗಳಲ್ಲಿ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ.