ದಕ್ಷಿಣ ಕನ್ನಡ ಸಂಘದ 58ನೆಯ ಸಂಸ್ಥಾಪನಾ ದಿನಾಚರಣೆ

ಕಲಬುರಗಿ:ಮಾ.31 : ದಕ್ಷಿಣ ಕನ್ನಡ ಸಂಘ ದ 58ನೆಯ ಸಂಸ್ಥಾಪನಾ ದಿನಾಚರಣೆಯನ್ನು ಮಾರ್ಚ್ 30ರಂದು ಶ್ರೀ ರಾಮನವಮಿಯ ದಿನ ಕಲ್ಬುರ್ಗಿಯ ಶ್ರೀರಾಮ ಮಂದಿರದಲ್ಲಿ ಆಚರಿಸಲಾಯಿತು.
ಕನ್ನಡ ಸಂಘವನ್ನು ಪಾದೂರು ರಾಮಕೃಷ್ಣ ತಂತ್ರಿ ಡಾಕ್ಟರ್ ಬಿ . ಕೆ ಶೆಟ್ಟಿ, ಪಿ .ಕೃಷ್ಣ ಭಟ್ ಆರೂರ್ ಶ್ರೀನಿವಾಸ್ ರಾಯರು ಸೇರಿದಂತೆ ಮಹನೀಯರು ಹುಟ್ಟು ಹಾಕಿದ್ದು ಕಲಬುರ್ಗಿಯಲ್ಲಿ ಸಾಮಾಜಿಕ ಸಾಂಸ್ಕøತಿಕ ಕಾರ್ಯಗಳೊಂದಿಗೆ ಸೇವಾ ಕಾರ್ಯವನ್ನು ಮುಂದುವರೆಸುತ್ತಿಸಿದೆ . ಇದೀಗ ಡಾ. ಸದಾನಂದ ಪೆರ್ಲ ಅವರ ಅಧ್ಯಕ್ಷತೆಯಲ್ಲಿ. ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಮತ್ತು ಪ್ರಶಾಂತ ಶೆಟ್ಟಿ ಇನ್ನಾ ಅವರ ಗೌರವಾಧ್ಯಕ್ಷತೆಯಲ್ಲಿ ,ಸಮಾಜೋಧಾರ್ಮಿಕ ,ಸಾಂಸ್ಕೃತಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದು 58ನೇ ಸಂಸ್ಥಾಪನಾ ದಿನದ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಅಕ್ಷಯ ಅಗ್ರೋ ಟ್ರೇಡರ್ಸ್ ನ ಪಾಲುದಾರರು ಹಾಗೂ ಸಂಘದ ಮಾಜಿ ಕೋಶಾಧ್ಯಕ್ಷರಾದ ಕೆ . ಎಸ್ ಪಟವರ್ಧನ್ ಅವರ ಮುಖ್ಯ ಅತಿಥಿಗಳಾಗಿ ಆಗಮಿಸಿ. ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ, ಮಾಜಿ ಕಾರ್ಯದರ್ಶಿ ರತ್ನಾಕರಾವ್, ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಅವರನ್ನು ರಾಮ ಮಂದಿರದ ಆಡಳಿತ ಮಂಡಳಿಯ ಗಿರಿಧರ ಭಟ್ ಮತ್ತು ಕಿಶೋರ್ ದೇಶಪಾಂಡೆ ಸನ್ಮಾನಿಸಿದರು.
ನಂತರ ಸಂಘದ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಪಟವರ್ಧನ್ ದಂಪತಿಗಳನ್ನು ಶಾಲು ಹಾಗೂ ಸ್ಮರಣಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾಧರ ಭಟ್, ಸುನಿಲ್ ಶೆಟ್ಟಿ, ಮುರಳಿಧರ ಭಟ್, ನಿರಂಜನ ರಾವ್, ಪ್ರಮೀಳಾ ಎಮ್ ಕೆ, ಆಶಾ ಪಟವರ್ಧನ್ ,ಶ್ರುತಿ ರಾಜೇಶ್ ಕಡೇಚೂರ್, ಅನೀಶ್ ಕಡೇಚೂರ್,ಶೈಲಜಾ ಅನೀಷ್ ಕಡೆಚೂರ್,ಶಶಿಕಲಾ ಶಾಸ್ತ್ರಿ, ಲಕ್ಷ್ಮೀನಾರಾಯಣ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಪ್ರಸಾದ ವಿತರಿಸಲಾಯಿತು.