
ಕಲಬುರಗಿ:ಸೆ.14: ದಕ್ಷಿಣ ಕನ್ನಡ ಸಂಘ ಕಲ್ಬುರ್ಗಿ ಇದರ 58ನೇ ವರ್ಷದ ಶ್ರೀ ಗಣೇಶೋತ್ಸವ ಒಂದು ದಿನದ ಕಾರ್ಯಕ್ರಮವನ್ನು ಕಲಬುರ್ಗಿಯ ಸಾರ್ವಜನಿಕ ಉದ್ಯಾನವನದ ಶ್ರೀ ಯಾತ್ರಿ ನಿವಾಸ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಜನರು ಒಟ್ಟಿಗೆ ಸೇರಿ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಕಾರ್ಯದರ್ಶಿ ಪಿ ಪುರಂದರ ಭಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ ಸೆಪ್ಟೆಂಬರ್ 19 ರಂದು ಬೆಳಿಗ್ಗೆ 9:00 ಗಣೇಶ ವಿಗ್ರಹ ಪ್ರತಿಷ್ಠಾಪನೆ ನಂತರ ರಂಗೋಲಿ ಸ್ಪರ್ಧೆ ಭಕ್ತಿಗೀತೆ ಚದ್ಮವೇಷ ಮಡಿಕೆ ಒಡೆಯುವ ಹಾಗೂ ಇತರ ಸ್ಪರ್ಧೆಗಳು ನಡೆಯಲಿದೆ ಮಹಾಪೂಜೆಯಾಗಲಿದ್ದು ಸಾಯಂಕಾಲ ತಿ ಯಿಂದ ಸಾಂಸ್ಕøತಿಕ ಕಾರ್ಯಕ್ರಮ ಪ್ರಾರಂಭವಾಗಲಿದೆ.ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಬಹುಮಾನ ವಿತರಣೆ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗೆ ಶ್ರೀಮತಿ ಪದ್ಮಾಕ್ಷಿ ಕೃಷ್ಣಭಟ್ಟ ಸ್ಮಾರಕ ಪುರಸ್ಕಾರ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಶ್ರೀಮತಿ ಇಂದಿರಾ ಅಶೋಕ್ ಸುವರ್ಣ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಭಾಗವಹಿಸಲಿ ದ್ದಾರೆ. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ, ನೃತ್ಯ ಗುರು ಶ್ರೀಮತಿ ಶ್ರವಣಾ ಪಿ. ಭಟ್ ಮಾರ್ಗದರ್ಶನದಲ್ಲಿ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ಬಳಿಕ ರಾತ್ರಿ 9 ಗಂಟೆಗೆ ವಿಸರ್ಜನಾ ಮೆರವಣಿಗೆ ನೆರವೇರಲಿದೆ.
ಕ್ರಿಕೆಟ್- ಟೆನಿಸ್ ಪುರಸ್ಕಾರ:
ಸಂಘವು ಈ ಬಾರಿ ಕ್ರಿಕೆಟ್ ಸ್ಪರ್ಧೆಯನ್ನು ಏರ್ಪಡಿಸಿದ್ದು ಸುಮಾರು 70 ಮಂದಿ ಕ್ರಿಕೆಟ್ ಪಟುಗಳು ಭಾಗವಹಿಸಿ ಕುಂದಾಪುರ ವಾರಿಯರ್ಸ್ ಶ್ರೀಮತಿ ಮಾಲತಿ ಮೆಂಡನ್ ಸ್ಮಾರಕ ಟ್ರೋಫಿನೊಂದಿಗೆ ಪ್ರಥಮ ಬಹುಮಾನ ಪಡೆದರೆ ಕುಡ್ಲ ಚಾಲೆಂಜರ್ಸ್ ದ್ವಿತೀಯ ಬಹುಮಾನ ಪಡೆಯಿತು. ಬಾಲ್ ಬ್ಯಾಡ್ಮಿಂಟನ್ ಸ್ಪರ್ಧಾ ವಿಜೇತರಿಗೆ ದಿನಕರ ಪೂಜಾರಿ ಸ್ಮಾರಕ ಕಪ್ ಜತ್ತನ್ ಸಹೋದರರು ಪ್ರಾಯೋಜಿಸಿದ್ದು ಸೆ. 17ರಂದು ಸ್ಪರ್ಧೆ ನಡೆಯಲಿದೆ. ಸಬ್ ಜೂನಿಯರ್ ನಿಂದ ಹಿಡಿದು ಹಿರಿಯರ ತನಕ ವಿವಿಧ ಸ್ಪರ್ಧೆಗಳನ್ನು ಸೆ. 10 ರಂದು ನಡೆಸಲಾಗಿದ್ದು ಇದರ ಬಹುಮಾನ ವಿತರಣೆಯನ್ನು ಗಣೇಶೋತ್ಸವ ಹಬ್ಬದ ದಿನ ಸಭೆಯಲ್ಲಿ ನೀಡಲಾಗುವುದು ಎಂದು ಅವರು ಹೇಳಿದರು. ಕರಾವಳಿಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.