ದಕ್ಷಿಣ ಕನ್ನಡ ಸಂಘದಿಂದ ಪ್ರತೀ ಮನೆಗೆ ತಿರಂಗಾರಕ್ತದಾನ ಶಿಬಿರ ಆ.7 ರಂದು

ಕಲಬುರಗಿ.ಆ.4:ಕಲಬುರಗಿಯ ದಕ್ಷಿಣ ಕನ್ನಡ ಸಂಘವು ಕಳೆದ 57 ವರ್ಷಗಳಿಂದ ಸಮಾಜೋ-ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸೇವಾ ಕಾರ್ಯಕೈಗೊಳ್ಳುತ್ತಿದ್ದು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ದಕ್ಷಿಣ ಕನ್ನಡ ಸಂಘದ ಪ್ರತೀ ಮನೆಗೂ ತ್ರಿವರ್ಣ ಧ್ವಜ ಹಸ್ತಾಂತರ ಹಾಗೂ ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಿದೆ.
ದಕ್ಷಿಣ ಕನ್ನಡ ಸಂಘವು ಆಗಸ್ಟ್ 7 ರಂದು ಬೆಳಿಗ್ಗೆ 10.30 ಕ್ಕೆ ಕಲಬುರಗಿಯ ಸಾರ್ವಜನಿಕ ಉದ್ಯಾನವನದಲ್ಲಿರುವ ಯಾತ್ರಿ ನಿವಾಸ್ ಹೋಟೆಲ್ ಸಭಾಂಗಣದಲ್ಲಿ ಪ್ರತಿ ಮನೆಗೂ ತಿರಂಗಾ ಮತ್ತು ರಕ್ತದಾನ ಶಿಬಿರ ಸಮಾರಂಭ ಏರ್ಪಡಿಸಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮತ್ತು ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಯಾನಂದ ಪಾಟೀಲ್ ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸೃತರಾದ ಮಹಾದೇವಪ್ಪ ಕಡೇಚೂರ ತಿರಂಗಾ ಹಸ್ತಾಂತರ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಲಬುರಗಿ ಜಿಲ್ಲಾ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ವೈದ್ಯರಾದ ಡಾ. ನಾಗರಾಜ ಬಿ. ಪಾಟೀಲ್, ಡಾ. ಜಗನ್ನಾಥ ಕಟ್ಟೀಮನಿ, ಡಾ. ರಕ್ಷಾ ಸತ್ಯನಾಥ ಶೆಟ್ಟಿ, ಡಾ. ರಾಜೇಶ್ ಕಡೇಚೂರ, ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ ಉಪಸ್ಥಿತರಿರುವರು. ಉದ್ಯಮಿಗಳಾದ ಶಿವರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿರುವರು.
ಸಂಘದ 50 ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡಲಿದ್ದು ಕಲಬುರಗಿಯ ಸರಕಾರಿ ರಕ್ತನಿಧಿ ಕೇಂದ್ರಕ್ಕೆ ರಕ್ತ ನೀಡಲಾಗುವುದು. ಅಮೃತ ಮಹೋತ್ಸವ ಸಂಭ್ರಮಾಚರಣೆಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.