ದಕ್ಷಿಣ ಕನ್ನಡ ಸಂಘಕ್ಕೆ ಪ್ರಧಾನಿಯವರ ನಿ – ಕ್ಷಯ ಪ್ರಶಂಸಾ ಪ್ರಮಾಣ ಪತ್ರ

ಕಲಬುರಗಿ:ಜ.16: ದಕ್ಷಿಣ ಕನ್ನಡ ಸಂಘವು ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ “ನಿ-ಕ್ಷಯ ಮಿತ್ರ ಯೋಜನೆ”ಯಡಿ ಕ್ಷಯ ರೋಗಿಗಳನ್ನು ದತ್ತು ಪಡೆದು ಪೌಷ್ಟಿಕ ಆಹಾರ ಕಿಟ್ ನೀಡಿ “ಕ್ಷಯ ಮುಕ್ತ ಕರ್ನಾಟಕ” ಗುರಿ ಸಾಧಿಸಲು ನೆರವಾಗುವುದಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪ್ರಧಾನಮಂತ್ರಿಯವರ ಮಹತ್ವಕಾಂಕ್ಷಿ ಯೋಜನೆಯ ನಿ- ಕ್ಷಯ ಮಿತ್ರ ಪ್ರಶಂಸಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಲ್ಬುರ್ಗಿಯ ಶ್ರೀರಾಮ ಮಂದಿರದಲ್ಲಿ ಜನವರಿ 15 ರಂದು ನಡೆದ ಎಳ್ಳು- ಬೆಲ್ಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಂಸಾ ಪ್ರಮಾಣ ಪತ್ರ ವಿತರಿಸಿದ ಕಲ್ಬುರ್ಗಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಚಂದ್ರಕಾಂತ ನರಿಬೋಳಿ ಮಾತನಾಡಿದರು. ಕೋವಿಡ್ ಗಿಂತಲೂ ಅಪಾಯಕಾರಿ ಕ್ಷಯ ರೋಗ ಕೋವಿಡಿನಿಂದ ಶೇಕಡ ಒಂದರಿಂದ ಎರಡರಷ್ಟು ಸಾವು ಸಂಭವಿಸಿದರೆ ಕ್ಷಯರೋಗದಿಂದ ಶೇಕಡ 10 ರಿಂದ 12 ರಷ್ಟು ಸಾವು ಸಂಭವಿಸುತ್ತಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2025ಕ್ಕೆ ಕ್ಷಯ ಮುಕ್ತ ಭಾರತ ನಿರ್ಮಾಣದ ಕನಸು ಹೊತ್ತು ನಿ- ಕ್ಷಯ ಮಿತ್ರ ಯೋಜನೆ ಜಾರಿ ಮಾಡಿದ್ದು ಇದರಲ್ಲಿ ಕ್ಷಯ ರೋಗಿಗಳಿಗೆ ಆರು ತಿಂಗಳ ಪೌಷ್ಟಿಕಾಂಶ ಕಿಟ್ ನೀಡಲು ಸ್ವಯಂಸೇವಾ ಸಂಸ್ಥೆಗಳ ಸಹಯೋಗ ಪಡೆಯಲಾಗುತ್ತಿದೆ. ದಕ್ಷಿಣ ಕನ್ನಡ ಸಂಘವು 10 ಕ್ಷಯ ರೋಗಿಗಳನ್ನು ದತ್ತು ಸ್ವೀಕರಿಸಿ ಆರು ತಿಂಗಳು ಕಿಟ್ ವಿತರಿಸಿ ನೆರವಾಗಿ ಸಂಘವು ಮಾದರಿ ಕೆಲಸವನ್ನು ಮಾಡಿ ಪ್ರಶಂಸೆಗೆ ಪಾತ್ರವಾಗಿದೆ ಜಿಲ್ಲೆಯಲ್ಲಿ 3000 ಕ್ಷಯ ರೋಗಿಗಳಿದ್ದು ಕೆಲವು ಪ್ರಮುಖ ಆಸ್ಪತ್ರೆ, ಸ್ವಯಂಸೇವಾ ಸಂಸ್ಥೆ ನಿ – ಕ್ಷಯ ಮಿತ್ರ ಯೋಜನೆಗೆ ಕೈಜೋಡಿಸಿ ನೆರವಾಗಿದೆ ಎಂದರು. ಆರೋಗ್ಯ ಇಲಾಖೆಯ ಮಕ್ಕಳ ಆರೋಗ್ಯ ಅಭಿವೃದ್ಧಿಯ ಅಧಿಕಾರಿ ಮಂಜುನಾಥ ಕಂಬಳಿಮಠ ಅವರು ಮಾತನಾಡಿ ದಕ್ಷಿಣ ಕನ್ನಡ ಸಂಘವು 10 ಕ್ಷಯ ರೋಗಿಗಳಿಗೆ ನಿರಂತರವಾಗಿ ಪೌಷ್ಟಿಕಾಂಶದ ಕಿಟ್ ನೀಡಿ ರೋಗಿಗಳ ಬಾಳಿಗೆ ನೆರವಾಗಿದೆ. ಶ್ರದ್ಧೆ ಮತ್ತು ಪ್ರಾಮಾಣಿಕತನದಿಂದ ಆರು ತಿಂಗಳುಗಳ ಕಾಲ ಸಂಘವು ಈ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದರು. ಸಂಘದ ಅಧ್ಯಕ್ಷರಾದ ಡಾಕ್ಟರ್ ಸದಾನಂದ ಪೆರ್ಲ ಅವರು ಮಾತನಾಡಿ ಸಂಘವು ಸಾಮಾಜಿಕ ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವ ಕಾರ್ಯಗಳನ್ನು ನಡೆಸುತ್ತಿದ್ದು ಅದರ ಭಾಗವಾಗಿ 10 ಕ್ಷಯ ರೋಗಿಗಳನ್ನು ದತ್ತು ಪಡೆದು ಈ ಕೆಲಸವನ್ನು ನೆರವೇರಿಸಲಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳ ನಿ- ಕ್ಷಯ ಯೋಜನೆಯ ಅಡಿಯಲ್ಲಿ ಸೇರ್ಪಡೆಗೊಂಡ ಸಂಘಕ್ಕೆ ಪ್ರಶಂಸ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸೇರಿದ ಎಲ್ಲರಿಗೂ ಎಳ್ಳು ಬೆಲ್ಲ ಹಂಚಿ ಶುಭ ಕೋರಲಾಯಿತು.ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾದ ವಿದ್ಯಾಧರ ಭಟ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ಕಿಶೋರ್ ದೇಶಪಾಂಡೆ, ಆರೋಗ್ಯ ಇಲಾಖೆಯ ಸಂತೋಷ್ ಕುಟ್ಟಳ್ಳಿ, ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾಉಪಸ್ಥಿತರಿದ್ದರು.ಕಾರ್ಯದರ್ಶಿ ಪುರಂದರ ಭಟ್ ಸ್ವಾಗತಿಸಿ ಧನ್ಯವಾದವಿತ್ತ ರು. ಸದಸ್ಯರಾದ ನರಸಿಂಹ ಮೆಂಡನ್, ಪುಂಡಲೀಕ ನಾಯಕ್, ರಾಜೇಂದ್ರ ಉಪಾಧ್ಯಾಯ, ಶ್ರೀಕಾಂತ್, ನಿರಂಜನ, ಅರುಣಾಚಲ ಭಟ್, ನಾಗರಾಜ್, ಮಹಾಕೀರ್ತಿ ಶೆಟ್ಟಿ, ರಾಜಶ್ರೀ ಶೆಟ್ಟಿ, ಶಾರದಾ ಭಟ್, ರೇಣುಕಾ ಶಿರ್ಲಾಲು ,ಜೊತೆ ಕಾರ್ಯದರ್ಶಿ ಮಮತಾ ಬಾಬು ರಾವ್ ಯಡ್ರಾಮಿ, ರೂಪಾ ಪುಂಡಲೀಕ ನಾಯಕ್ ಹಾಜರಿದ್ದರು.