ದಕ್ಷಿಣ ಆಫ್ರಿಕಾಕ್ಕೆ ಕಾಲಾರ ಭೀತಿ

ನವದೆಹಲಿ,ಮಾ.೧೭- ಚಂಡಮಾರುತ ’ಫ್ರೆಡ್ಡಿ ಆರ್ಭಟಕ್ಕೆ ದಕ್ಷಿಣ ಆಫ್ರಿಕಾದ ಮಲಾವಿಯಲ್ಲಿ ೩೨೬ ಜೀವಗಳು ಬಲಿಯಾಗಿದ್ದು ಚಂಡ ಮಾರುತದ ನಂತರ ಕಾಲಾರ ಸೇರಿ ಸಾಂಕ್ರಾಮಿಕ ರೋಗ ಹೆಚ್ಚುವ ಭೀತಿ ಸೃಷ್ಟಿಯಾಗಿದೆ.

ಆಫ್ರಿಕಾದ ಚಂಡಮಾರತದ ಅವಾಂತರದಿಂದ ಅವಶೇಷಗಳಡಿಯಲ್ಲಿದ್ದ ಜನರನ್ನು ಹುಡುಕಲು ,ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಬರದಿಂದ ಸಾಗಿದೆ.

ಮತ್ತೊಂದೆಡೆ ಆಹಾರ ಮತ್ತು ಶುದ್ಧ ನೀರಿನ ಅಬಾವ ಎದುರಾಗಿದೆ. ಇದರ ಜೊತೆಗೆ ಕಾಲಾರ ಸೇರಿದಂತೆ ಸಾಂಕ್ರಾಮಿಕ ರೋಗದ ಭೀತಿ ಎದುದಾಗಿದೆ.

ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಚಿಲೋಬ್ವೆಯಿಂದ ೩೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ಮುಂದುವರೆದಂತೆ ಡಜನ್ಗಟ್ಟಲೆ ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಜಾಂಬಿಕ್ ಮತ್ತು ಮಡಗಾಸ್ಕರ್ ಕಷ್ಟದ ಸಮಯದಲ್ಲಿ ಬಾರಿ ಹಾನಿಯಾಗಿದ್ದು ಜನರು ತತ್ತರಿಸುವಂತೆ ಮಾಡಿದೆ

ಮಲಾವಿ ಮತ್ತು ಮೊಜಾಂಬಿಕ್‌ನಲ್ಲಿ, ಫ್ರೆಡ್ಡಿ ಚಂಡಮಾರುತದಿಂದ ಈಗಾಗಲೇ ಕಾಲರಾ ಕಾಣಿಸಿಕೊಂಡಿದ್ದು ಅನೇಕ ಸಾಂಕ್ರಾಮಿಕ ರೋಗದಿಂದ ಸಾವುಗಳು ಮತ್ತು ಇತರ ನೀರಿನಿಂದ ಹರಡುವ ಕಾಯಿಲೆಗಳು ಸಹ ಹೆಚ್ಚಾಗುವ ನಿರೀಕ್ಷೆಯಿದೆ.

ಚಂಡಮಾರುತದ ಹಾನಿಯ ಕುರಿತು
ನಾಲ್ಕು ಮಕ್ಕಳ ತಾಯಿ ಡೊರೊಥಿ ವಾಚೆಪಾ ಪ್ರತಿಕ್ರಿಯಿಸಿ ವಿಮಾನ ಹಾರಾಟ ಶಬ್ದವನ್ನು ಹೋಲುವ’ ಕಿವುಡಗೊಳಿಸುವ ಶಬ್ದದಿಂದ ಎಚ್ಚರವಾಯಿತು ಎಂದು ಹೇಳಿದರು.

ಪತಿ ೨೦೧೪ ರಲ್ಲಿ ನಿಧನರಾದ ನಂತರ ತರಕಾರಿ ಮಾರಾಟ ಮಾಡುವ ಸಣ್ಣ-ಪ್ರಮಾಣದ ವ್ಯಾಪಾರವನ್ನು ಮಾಡುತ್ತಿದ್ದೆ. ಇದೀಗ ಅದು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದಿದ್ದಾರೆ.

ಪ್ರಧಾನಿ ಸಂತಾಪ:

ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಚಂಡಮಾರುತದಿಂದ ಸಾವನ್ನಪ್ಪಿದ ಮಂದಿಗೆ ಪ್ರಧಾನಿ ನರೇಂದ್ರ ಮೋದಿ
ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಲಾವಿಯಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಫ್ರೆಡ್ಡಿ ಚಂಡಮಾರುತ. ಸಂತ್ರಸ್ತ್ರರ ಜೊತೆ ಭಾರತ ಜೊತೆಗಿದೆ ಎಂದು ಹೇಳಿದ್ದಾರೆ.