ದಕ್ಷಿಣೆ ಎಂಬ ಭಿಕ್ಷೆಯಿಂದ ಬದುಕುವ ಮಸಣ ಕಾರ್ಮಿಕರನ್ನು ನೌಕರರೆಂದು ಪರಿಗಣಿಸಿ-ಎ.ಸ್ವಾಮಿ

ಸಂಡೂರು :ಅ:30 ದಕ್ಷಿಣೆ ಎಂಬ ಭಿಕ್ಷೆಯಿಂದಲೇ ಬದುಕನ್ನು ಸಾಗಿಸುತ್ತಿರುವ ಮಸಣ ಕಾರ್ಮಿಕರನ್ನು ಪಂಚಾಯಿತಿಯಲ್ಲಿ ನೌಕರರನ್ನಾಗಿಸುವ ಮೂಲಕ ಮಸಣ ಕಾರ್ಮಿಕರ ಬದುಕನ್ನು ಹಸನಾಗಿಸಿ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಹೆಚ್.ಮಂಜುನಾಥ ಒತ್ತಾಯಿಸಿದರು.
ಅವರು ಇಂದು ಪಟ್ಟಣತಾಲೂಕು ಪಂಚಾಯಿತಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಪ್ರತಿ ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದರೂ ಸಹ ಅವರ ಅಂತ್ಯೆಕ್ರಿಯೆಯನ್ನು ಅವರು ನೀಡುವ ದಕ್ಷಿಣೆ ಎಂಬ ಭಿಕ್ಷೆಯ ಹಣದಿಂದಲೇ ಬದುಕನ್ನು ಸಾಗಿಸಬೇಕಾದ ದುಸ್ಥಿತಿಯಿಂದ ಮುಕ್ತಿಯನ್ನು ಕೊಡಬೇಕು, ಅದಕ್ಕಾಗಿ ಅವರನ್ನು ಮಸಣ ನಿರ್ವಾಹಕ ಎಂಬ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಯ ನೌಕರರನ್ನಾಗಿಸಬೇಕು, ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 2500 ರೂಪಾಯಿಗಳ ಕೂಲಿಯನ್ನು ನೀಡುವಂತೆ ಕ್ರಮ ವಹಿಸಬೇಕು, ಮಸಣದಲ್ಲಿ ಕಾರ್ಯನಿರ್ವಹಿಸುವಾಗ ಬೇಕಾಗುವ ಎಲ್ಲಾ ಸುರಕ್ಷತಾ ಪರಿಕರಗಳನ್ನು ನೀಡಬೇಕು, ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಸ್ವಾಮಿ.ಎ ಮಾತನಾಡಿ ಮಸಣ ಕಾರ್ಮಿಕರ ಸರ್ವೇಕಾರ್ಯವನ್ನು ಮಾಡುವ ಮೂಲಕ ಅವರನ್ನು ಗುರುತಿಸಬೇಕು, ತಕ್ಷಣ ಅವರಿಗೆ ಸೂಕ್ತ ಬದುಕನ್ನು ಸಾಗಿಸಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸೂಕ್ತ ಕೆಲಸ ನೀಡಬೇಕು, ಸ್ಮಶಾನದಲ್ಲಿ ಕುಣಿ ತೆಗೆಯುವು, ಮುಚ್ಚುವ ಕಾರ್ಯಕ್ಕೆ ಸೂಕ್ತ ಸ್ಥಳಗಳೂ ಇಲ್ಲದೇ ಬಹು ನಿಕೃಷ್ಟವಾದ ಪರಿಸರದಲ್ಲಿ ಕೆಲಸ ಮಾಡಬೇಕಾಗಿದೆ, ಅವುಗಳನ್ನು ಪಾರ್ಕ ರೀತಿಯಲ್ಲಿ ಅಭಿವೃದ್ದಿ ಪಡಿಸಬೇಕು, ಸ್ಮಶಾನದಲ್ಲಿ ಮೂಲಭೂತ ಸೌಲಭ್ಯಗಳನ್ನು ಅವರಿಗೆ ಒದಗಿಸಬೇಕು, ಕಾರ್ಮಿಕರಿಗೆ ಭವಿಷ್ಯನಿಧಿಯೋಜನೆ ಜಾರಿಗೊಳಿಸಬೇಕು, ವಯೋವೃದ್ದ ಮಸಣ ಕಾರ್ಮಿಕರಿಗೆ ಕನಿಷ್ಠ 3000 ಸಾವಿರ ರೂಪಾಯಿಗಳನ್ನು ಪಿಂಚಣಿ ನೀಡಬೇಕು, ಅವರ ಆರೋಗ್ಯ ರಕ್ಷಣೆಗಾಗಿ ಉಚಿತ ಆರೋಗ್ಯ ಸೇವೆ ನೀಡಬೇಕು, 80 ಮತ್ತು 80 ಅಡಿ ವಿಸ್ತೀರ್ಣದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸೂಕ್ತ ನಿವೇಶನ ನೀಡಬೇಕು, ಅಲ್ಲದೆ ಮನೆ ನಿರ್ಮಾಣ ಮಾಡಿಕೊಳ್ಳಲು ಕನಿಷ್ಠ 5 ಲಕ್ಷವಾದರೂ ಧನಸಹಾಯ ಮಾಡಬೇಕು, ಮಸಣ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು, ಗ್ರಾಮಗಳಲ್ಲಿ ಕಾಡುಸೋಸುವಂತಹ ಕೆಲಸಕ್ಕೆ ಕನಿಷ್ಠ 2500 ರೂಪಾಯಿಗಳನ್ನು ಪಂಚಾಯಿತಿಗಳು ನೀಡುವಂತೆ ಮಾಡಿ ಅವರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ತೋರಣಗಲ್ಲು, ಚೋರುನೂರು, ದರೋಜಿ, ವಡ್ಡು, ಬಸಾಪುರ, ಇತರ ಹಲವಾರು ಗ್ರಾಮಗಳಿಂದ ಮಸಣ ಕಾರ್ಯ ಮಾಡುವವರು ಅಗಮಿಸಿದ್ದರು, ಅಲ್ಲದೆ ಮುಖಂಡರಾದ ಎ.ಸ್ವಾಮಿ, ದುರುಗೇಶ್, ಶಂಕ್ರಪ್ಪ, ತಿಪ್ಪೇಸ್ವಾಮಿ, ನಾಗೇಶ್, ಸೊಂಡ್ರಪ್ಪ, ಅಂಜಿನಪ್ಪ, ಹುಲಿಕುಂಟಿ, ಹೊನ್ನೂರಪ್ಪ, ಗೌರವಾಧ್ಯಕ್ಷ ಎ.ಸ್ವಾಮಿ, ಇತರ ಸದಸ್ಯರು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಶಿವರಾಜ್, ವ್ಯವಸ್ಥಾಪಕ ಲೋಕೇಶ್‍ಬಾಬು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.