ದಕ್ಷಿಣಭಾಗದಲ್ಲಿ ದಾವಣಗೆರೆ ಒನ್ ಕೇಂದ್ರ ಸ್ಥಾಪಿಸಲು ಮನವಿ

ದಾವಣಗೆರೆ.ನ.೧೫: ದಾವಣಗೆರೆ ದಕ್ಷಿಣದ ಹಳೇ ನಗರ ಭಾಗದಲ್ಲಿ ದಾವಣಗೆರೆ ಒನ್  ಕೇಂದ್ರದ ಅಗತ್ಯವಿದ್ದು,  ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಲ್. ರಾಘವೇಂದ್ರ, ಕಳೆದ ಆರು ವರ್ಷಗಳಿಂದ ಆಮ್ ಆದ್ಮಿ ಪಾರ್ಟಿ ವತಿಯಿಂದ ದಾವಣಗೆರೆಯ ದಕ್ಷಿಣಕ್ಕೆ ದಾವಣಗೆರೆ ಒನ್ ಸೇವಾ ಕೇಂದ್ರ ವನ್ನು ಸ್ಥಾಪಿಸಬೇಕೆಂದು ನಾವುಗಳು ಈ ಹಿಂದಿನಿಂದ ಹೋರಾಟವನ್ನು ಮಾಡುತ್ತಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.ಈ ಹಿಂದೆ ನಾವುಗಳು ಈ ವಿಷಯಕ್ಕೆ ಸಂಬಂಧಪಟ್ಟಂತೆ ಮನವಿಯನ್ನು ಹಲವು ಬಾರಿ ಕೊಟ್ಟಿದ್ದರೂ ಕ್ರಮ ಕೈಗೊಂಡಿಲ್ಲ. ದಕ್ಷಿಣದಲ್ಲಿ ದಾವಣಗೆರೆ ಒನ್ ಮಾಡುವುದರಿಂದ ಅಲ್ಲಿನ ಜನರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ.ಹಳೇ ನಗರ ಭಾಗದಲ್ಲಿ  ಹೆಚ್ಚು ಕೂಲಿ ಕಾರ್ಮಿಕರು , ಆಟೋ ಓಡಿಸುವವರು , ಬೀದಿಬದಿ ವ್ಯಾಪಾರಸ್ಥರು , ಕಟ್ಟಡ ಕಾರ್ಮಿಕರೇ ಹೆಚ್ಚು ಇರುವ ಭಾಗವಾಗಿದೆ . ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಹೊಸ ದಾವಣಗೆರೆಯಲ್ಲಿ ರುವ ದಾವಣಗೆರೆ ಕೇಂದ್ರ ಒನ್ ಹೋಗಿ ಬರಲು ಈ ಸಮಯ ವ್ಯರ್ಥವಾಗುತ್ತದೆ . ಹಾಗಾಗಿ ಆದಷ್ಟು ಬೇಗ ಹಳೆಯ ದಾವಣಗೆರೆ ಭಾಗದಲ್ಲಿ ದಾವಣಗೆರೆ ಒನ್ ಸೇವಾ ಕೇಂದ್ರವನ್ನು ಸ್ಥಾಪಿಸಬೇಕು ಇಲ್ಲವಾದಲ್ಲಿ ಸಾರ್ವಜನಿಕರ  ಎಂದು ಒತ್ತಾಯಿಸಿದರು.ನಾಳೆ  ಮತ್ತೊಂದು ಬಾರಿ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು.  ೧೫ದಿನಗಳೊಳಗೆ ಕೇಂದ್ರವನ್ನು ಆರಂಭಿಸದಿದ್ದಲ್ಲಿ  ದಾವಣಗೆರೆಯ ದಕ್ಷಿಣದ ನಾಗರೀಕರೊಂದಿಗೆ ಸೇರಿ ಹೋರಾಟವನ್ನು ಮಾಡುತ್ತೇವೆ ಎಂದು  ರಾಘವೇಂದ್ರ ಹೇಳಿದರು.ಸುದ್ದಿಗೋಷ್ಠಿಯಲ್ಲಿ, ಪಕ್ಷದ ಮುಖಂಡರಾದ ಸಮೀರ್ ಹಸನ್, ಆದಿಲ್ ಖಾನ್, ಕೆ. ರವೀಂದ್ರ, ಸಿದ್ದೇಶ್ ಚಂದ್ರ ಉಪಸ್ಥಿತರಿದ್ದರು.