ದಕ್ಷಿಣದಲ್ಲಿ ಬಿಜೆಪಿಗೆ ಹೊಡೆತ

ಚೆನ್ನೈ,ಏ.೭- ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾರಿ ಹೊಡೆತ ಬೀಳಲಿದೆ ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.
ಉತ್ತರ ಭಾರತದಲ್ಲಿಯೂ ಬಿಜೆಪಿ ಪ್ರಭಾವ ಕ್ಷೀಣಿಸುತ್ತಿದೆ. ಹೀಗಾಗಿ ದಕ್ಷಿಣ ಭಾರತದ ಕಡೆ ಗಮನ ಹರಸಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತವಿದೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ಈ ಭಾರಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಆಟ ನಡೆಯುವುದಿಲ್ಲ ಎಂದಿದ್ದಾರೆ
ತಮಿಳುನಾಡಿನ ಎಲ್ಲಾ ೩೮ ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ ೧೯ ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂದರ್ಶನದಲ್ಲಿ ಅವರು ರಾಜ್ಯಪಾಲರ ಮೂಲಕ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿಯ ಅಸಹಕಾರ ಮತ್ತು ಕಚ್ಚತೀವು ದ್ವೀಪದ ಗಲಾಟೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ
ಜನವಿರೋಧಿ ಮೋದಿ ಸರಕಾರದಿಂದ ಭಾರತದ ಪ್ರತಿಯೊಂದು ಕುಟುಂಬವೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿತವಾಗಿದೆ. ಸಮಾಜದ ಎಲ್ಲಾ ವರ್ಗಗಳು, ಮುಖ್ಯವಾಗಿ ಬಡವರು, ರೈತರು, ವ್ಯಾಪಾರ ಸಮುದಾಯ, ಗೃಹಿಣಿಯರು, ವಿದ್ಯಾರ್ಥಿಗಳು, ಮೀನುಗಾರರು ಮತ್ತು ಯುವಕರು ಕಳೆದ ೧೦ ವರ್ಷಗಳಿಂದ ಬಿಜೆಪಿಯ ದುರಾಡಳಿತದ ನೋವನ್ನು ಸಹಿಸಿಕೊಳ್ಳುತ್ತಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಪ್ರಧಾನಿ ನರೇಂದ್ರ ಮೋದಿ ವಂಚನೆ ಬಯಲಾಗಿದೆ. ಉತ್ತರ ಭಾರತದಲ್ಲಿ ಬಿಜೆಪಿಯ ಇಮೇಜ್ ಛಿದ್ರಗೊಂಡಿದೆ ಎಂದು ಹೇಳಿದ್ದಾರೆ
ಬಿಜೆಪಿ ನಾಯಕತ್ವ ಉತ್ತರದಲ್ಲಿನ ನಷ್ಟವನ್ನು ಸರಿದೂಗಿಸಲು ದಕ್ಷಿಣದತ್ತ ಗಮನ ಹರಿಸುತ್ತಿದ್ದಾರೆ. ಬಿಜೆಪಿಯ ಹತಾಶ ಪ್ರಯತ್ನಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಹು ಆಡಂಬರದ ರೋಡ್ ಶೋಗಳ ಹೊರತಾಗಿಯೂ ಇತ್ತೀಚೆಗೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಜನಾದೇಶ ಪಡೆದುಕೊಂಡಿದೆ ಎಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿನಲ್ಲಿ ಕಮಲ ಅರಳಲಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ, ತಮಿಳುನಾಡು ಜಾತ್ಯತೀತ ನಾಡು, ದಕ್ಷಿಣ ಭಾರತದ ಜನತೆ ಈ ಬಾರಿಯೂ ಬಿಜೆಪಿಗೆ ಹೊಡೆತ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದಾಂತದ ಯುದ್ದ

ಲೋಕಸಭೆ ಚುನಾವಣೆಯಲ್ಲಿ ಸಿದ್ದಾಂತಗಳ ನಡುವಿನ ಯುದ್ದ ಬಿಜೆಪಿಯ ಸಿದ್ಧಾಂತ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಪ್ರಭುತ್ವ, ಭ್ರಾತೃತ್ವ, ಜಾತ್ಯತೀತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ದವಾದುದು. ಆದರೆ ನಮ್ಮದು ದ್ರಾವಿಡ ಚಳವಳಿಯಿಂದ ಪಾಲಿಸಲ್ಪಟ್ಟ ಮತ್ತು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಮತ್ತು ಎಲ್ಲರನ್ನು ಸಮಾನ ಉದ್ದೇಶದಿಂದ ನೋಡುವ ಗುಣ ನಮ್ಮದು ಎಂದು ತಿಳಿಸಿದ್ದಾರೆಮತ್ತೊಂದೆಡೆ, ಎಐಎಡಿಎಂಕೆ ಅವಕಾಶವಾದಿ ಮತ್ತು ಸೈದ್ಧಾಂತಿಕವಾಗಿ ದಿವಾಳಿಯಾದ ಪಕ್ಷವಾಗಿದ್ದು ಅದು ಬಿಜೆಪಿಗೆ ಶರಣಾಗಿದೆ. ಆದ್ದರಿಂದ, ಈ ಎರಡೂ ಪಕ್ಷಗಳನ್ನು ಪ್ರತ್ಯೇಕಿಸಿ ನೋಡುವ ಅಗತ್ಯವಿಲ್ಲ. ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಹೇಳಿದ್ದಾರೆ.ಆದರ್ಶ ಪ್ರಧಾನಿ ಎಂದರೆ ಯಾವುದೇ ಕೃತಕ ಚಿತ್ರಣ ಅಗತ್ಯವಿಲ್ಲ, ಬದಲಿಗೆ ಬಡವರ ಕಾಳಜಿ ಹೊಂದಿದವರು ಆಗಬೇಕು.೧೪೦ ಕೋಟಿ ಜನರನ್ನು ಮತ್ತು ದೇಶವನ್ನು ಪ್ರೀತಿ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಾರೆ.ಅಂತಹ ಅಭ್ಯರ್ಥಿ ಇಂಡಿಯಾ ಮೈತ್ರಿಕೂಟದಲ್ಲಿ ಸಿಗಲಿದ್ದಾರೆ ಎಂದು ತಿಳಿಸಿದ್ದರೆ೨೦೦೪ರ ಚುನಾವಣೆಯ ಸಂದರ್ಭದಲ್ಲಿ ಡಾ.ಮನಮೋಹನ್ ಸಿಂಗ್ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸೋನಿಯಾ ಗಾಂಧಿ ಅವರು ಹೆಚ್ಚಿನ ಅಬ್ಬರವಿಲ್ಲದೆ ತಾವು ಪಡೆದ ಜನಾದೇಶವನ್ನು ಅವರಿಗೆ ಒಪ್ಪಿಸಿದರು. ಅದೇ ರೀತಿ ಈ ಬಾರಿಯೂ ಆಗಲಿದೆ ಎಂದಿದ್ದಾರೆ