ದಂಪತಿಗಳು ಪರಸ್ಪರ ನಂಬಿಕೆಯಿಂದ ಬದುಕಬೇಕು: ಬಸವಪ್ರಭು ಶ್ರೀ

ಚಿತ್ರದುರ್ಗ.ಏ.೬ : ಮಾನವ ಬದುಕಿನಲ್ಲಿ ಪ್ರೇಮ ಇದ್ದರೆ ಯಶಸ್ಸು ಸಾಧಿಸಲು ಸಾಧ್ಯ. ಹಾಗಾಗಿ ಪ್ರೀತಿ-ಪ್ರೇಮದಿಂದ ಬದುಕಬೇಕು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.ಶ್ರೀ ಮುರುಘರಾಜೇಂದ್ರ ಮಠದಲ್ಲಿ  ನಡೆದ ಮೂವತ್ಮೂರನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶ್ರೀಮಂತರು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಆದರೂ ಕೆಲವೊಮ್ಮೆ ಇಂಥ ಮದುವೆಗಳು ಬಾಡಿ ಹೋಗುತ್ತವೆ. ಕಾರಣ ಸಂಪತ್ತು ಇರುವ ಕಡೆ ಪ್ರೇಮ ಇರುವುದಿಲ್ಲ. ಯುವಜನತೆ ಮಧ್ಯೆ ಒಂದಿಷ್ಟು ಪ್ರೀತಿ-ವಿಶ್ವಾಸದ ಕೊರತೆ ಇದೆ. ಅದನ್ನು ಯುವಕರು ಅರ್ಥ ಮಾಡಿಕೊಂಡು ಸಾಗಬೇಕು. ಮನೆಯಲ್ಲಿ ಗಂಡ-ಹೆAಡಿರ ಮಧ್ಯೆ ಹೊಂದಾಣಿಕೆ ಮುಖ್ಯವಾಗುತ್ತದೆ. ಇಬ್ಬರ ಮಧ್ಯೆ ಅನುಮಾನಕ್ಕೆ ಆಸ್ಪದವಾಗಬಾರದು. ಪರಸ್ಪರ ನಂಬಿಕೆಯಿAದ ಬದುಕಬೇಕೆಂದು ನುಡಿದರು.ಸಮ್ಮುಖ ವಹಿಸಿದ್ದ ಜೇವರ್ಗಿ ತಾ. ಕುಕನೂರಿನ ಶ್ರೀ ಪ್ರಭುಲಿಂಗ ದೇವರು ಮಾತನಾಡಿ, ಅಂಗಪ್ರವೇಶ, ರಂಗಪ್ರವೇಶ, ಸಂಗಪ್ರವೇಶ ಮತ್ತು ಲಿಂಗಪ್ರವೇಶ ಇವು ಮನುಷ್ಯನ ಬದುಕಿನ ಅಂಗಗಳು. ಮುರುಘಾ ಪರಂಪರೆ ಬಹಳ ದೊಡ್ಡದು ಎಂದು ಹೇಳಿದರು.ಚಿಕ್ಕುಂತಿಯ ಶ್ರೀ ಬೋರೇಶ ಗುರೂಜಿ ಆಶ್ರಮದ ಶ್ರೀ ಶಿವಮೂರ್ತಿ ಸ್ವಾಮಿಗಳು ಮಾತನಾಡಿ, ಶ್ರೀಮಠದಲ್ಲಿ ಅನ್ನದಾಸೋಹ, ಜ್ಞಾನದಾಸೋಹ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಉಚಿತವಾಗಿ ಕಲ್ಯಾಣ ಮಹೋತ್ಸವ ಕಳೆದ ಮೂವತ್ಮೂರು ವರ್ಷಗಳಿಂದ ಪ್ರತಿ ತಿಂಗಳು ನಡೆಯುತ್ತಿದೆ. ವಿವಾಹದ ನಂತರ ಸಹಬಾಳ್ವೆ ಬಹಳ ಮುಖ್ಯ. ಸಂಸಾರದಲ್ಲಿ ಏನೇ ಕಷ್ಟ ಬಂದರು ಹೊಂದಾಣಿಕೆಯಿAದ ಜೀವನ ಸಾಗಿಸಬೇಕೆಂದು ಹೇಳಿದರು.