ಕಲಬುರಗಿ:ಜೂ.20: ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದಲ್ಲಿ ದಂಪತಿಗಳು ಒಟ್ಟಿಗೆ ಡಾಕ್ಟರೇಟ್ ಪದವಿ ಪಡೆದುಕೊಂಡರು.
ಯಡ್ರಾಮಿ ತಾಲ್ಲೂಕಿನ ಡಾ.ಮಹಾಲಿಂಗಪ್ಪ ಮಂಗಳೂರು ಅರ್ಥಶಾಸ್ರ್ತ ಸೌಭಾಗ್ಯ ಮಂಗಳೂರು ಅವರು ಕನ್ನಡ ಅಧ್ಯಯನದಲ್ಲಿ ಪಿಹೆಚ್.ಡಿ ಪಡೆದುಕೊಂಡರು.
ಡಾ.ಮಹಾಲಿಂಗಪ್ಪ ಅವರು ಅರ್ಥಶಾಸ್ರ್ತ ವಿಭಾಗದ ಡಾ.ದಶರಥ ನಾಯಕ ಅವರ ಮಾರ್ಗದರ್ಶನದಲ್ಲಿ “ದ ರೋಲ್ ಆಫ್ ಡಾ.ಬಿ.ಆರ್.ಅಂಬೇಡ್ಕರ್ ಡೆವೆಲಪಮೆಂಟ್ ಕಾಪೆರ್Çರೇಶನ್ ಇಮ್ಯಾನ್ಸಿಫಿಕೇಶನ್ ಆಫ್ ದಲಿತ್ಸ್ ದ ಸ್ಪೇಷಲ್ ರೆಫರೆನ್ಸ್ ಟು ಕಲಬುರಗಿ ಡಿಸ್ರ್ಟಿಕ್ಟ್” ಎಂಬ ವಿಷಯದ ಮೇಲೆ ಅಧ್ಯಯನ ಮಾಡಿದ್ದರು.
ಡಾ. ಸೌಭಾಗ್ಯ ಅವರು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪೆÇ್ರ.ಹೆಚ್.ಟಿ ಪೆÇೀತೆ ಅವರ ಮಾರ್ಗದರ್ಶನದಲ್ಲಿ ಬಿ.ಶ್ಯಾಮಸುಂದರ್ ಅವರ ಜೀವನ ಸಾಧನೆಯ ಕುರಿತು ಸಂಶೋಧನೆ ಕೈಗೊಂಡಿದ್ದರು.