ಮುದ್ದೇಬಿಹಾಳ : ಮಾ.25:ಮದುವೆಗಳು ಸ್ವರ್ಗದಲ್ಲಿ ನಡೆದಿರುತ್ತವೆ. ದಂಪತಿಗಳಲ್ಲಿ ಪರಸ್ಪರ ತಿಳುವಳಿಕೆ, ಅನ್ಯೂನ್ಯ ಸ್ವಭಾವ, ಪ್ರೀತಿ ವಿಶ್ವಾಸÀ ಮೂಡಿದಾಗ ಮಾತ್ರ ಬೆಲೆ ಬರುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ನುಡಿದರು.
ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ಹಾಗೂ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣಾದವಳು ಜೀವನದಲ್ಲಿ ಎಷ್ಟೇ ತೊಂದರೆಗಳು ಬಂದರೂ ತಾಳ್ಮೆಯಿಂದಿರಬೇಕು. ಅತ್ತೆ ಮಾವನನ್ನು ತಂದೆ ತಾಯಿಗಳಂತೆ ತಿಳಿಯಬೇಕು. ಸೋಸೆಯನ್ನು ಮಗಳೆಂದು ತಿಳಿದಲ್ಲಿ ಮನೆ ಸ್ವರ್ಗವಾಗುತ್ತದೆ. ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ನೋಡಿದಲ್ಲಿ ಬಾಳು ಬಂಗಾರವಾಗುವದರಲ್ಲಿ ಬೆರೆ ಮಾತಿಲ್ಲ ಎಂದರು.
ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಶ್ರೀಗಳು ಮಾತನಾಡಿ, ಈ ಭಾಗದ ಕುರುಬ ಸಮಾಜದ ನಾಯಕ ಮಲ್ಲಿಕಾರ್ಜುನ ಮದರಿಯವರನ್ನ ಯಾರು ಎಂದು ಕೇಳಿ ಕುರುಬ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಮದರಿ ಅವರ ಜೊತೆಗೆ ಈ ಭಾಗದ ಮುಖಂಡರು ನಿಂತರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಮಾತನಾಡಿ, ಚುನಾವಣೆಯ ಸಲುವಾಗಿ ಸಾಮೂಹಿಕ ವಿವಾಹ ಮಾಡುತ್ತಿಲ್ಲ, 10 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಟಿಕೇಟ್‍ಗೆ ಅರ್ಜಿ ಹಾಕಿದ್ದಕ್ಕೆನೇ ನಮ್ಮನ್ನು ಕಡೆಗಣಿಸುವ ಕಾರ್ಯ ಮಾಡಿದ್ದಾರೆ. ಸಿದ್ಧರಾಮಯ್ಯನವರ ಜೊತೆಗೆ ನಮ್ಮದು ಅನೋನ್ಯ ಸಂಬಂಧ ಇದೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದೇವೆ. ಪಕ್ಷವನ್ನು ಬೆಳೆಸಿದ್ದೇವೆ. ಆದರೆ ಈಚೇಗೆ ಪ್ರಜಾಧ್ವನಿ ಸಮಾವೇಶದಲ್ಲಿ ಹಿಂದುಳಿದ ವರ್ಗದವರನ್ನು ತುಳಿಯುವ ಕೆಲಸ ಮಾಡಿದ್ದಾರೆ. ಸಿದ್ಧರಾಮಯ್ಯನವರ ಜನ್ಮದಿನಕ್ಕೆ ವಾಹನಗಳನ್ನು ಕಳುಹಿಸಿದ್ದು, ಪ್ರಜಾಧ್ವನಿ ಸಮಾವೇಶಕ್ಕೆ ನೂರಾರು ಫ್ಲೆಕ್ಸ್‍ಗಳನ್ನು ಅಳವಡಿಸಿ ಪಕ್ಷಕ್ಕೆ, ಪಕ್ಷದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದರೂ ನಮ್ಮ ಮುಖ ಕಾಣದಂತೆ ವಿಡಿಯೋ ಕೂಡಾ ಮಾಡದಷ್ಟು ನಮ್ಮನ್ನು ಅವಮಾನಿಸಿದ್ದಾರೆ. ಬರಲಿರುವ ದಿನಗಳಲ್ಲಿ ನನ್ನ ಅಭಿಮಾನಿಗಳು, ಹಿರಿಯರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಗಂಗಾಧರರಾವ್ ನಾಡಗೌಡ(ಮುನ್ನಾಧಣಿ) ಮಾತನಾಡಿ, ಕೆಲವೊಬ್ಬರು ರಾಜಕೀಯ ದೃಷ್ಟಿ ಇಟ್ಟುಕೊಂಡು ಮದುವೆ ಮಾಡುವುದು, ಬಟ್ಟೆ ಕೊಡಿಸುವುದು, ಜಾತ್ರೆ ಮಾಡಿಸುವುದು ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಯಾವುದೇ ಅಪೇಕ್ಷೆ ಇಲ್ಲದೇ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸರೂರ ಅಗತೀರ್ಥ ಶಾಖಾ ಮಠದ ರೇವಣಸಿದ್ದೇಶ್ವರ ಶಾಂತಮಯ, ಯರಝರಿಯ ಯಲ್ಲಾಲಿಂಗ ಮಠದ ಮಲ್ಲಾರಲಿಂಗ ಶ್ರೀಗಳು, ಹಿರೇಮುರಾಳ ಸಂಗಮೇಶ್ವರ ಪಿಕೆಪಿಎಸ್ ಅಧ್ಯಕ್ಷ ಬಿ.ಬಿ.ಭೋವಿ, ಜಿ.ಪಂ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಪಾಟೀಲ್, ಕೆಂಚಪ್ಪ ಬಿರಾದಾರ, ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರಗೌಡ ಸೂಳಿಭಾವಿ ಮೊದಲಾದವರು ಮಾತನಾಡಿದರು.
ಸರೂರಿನ ಶಿವಯ್ಯ ಗುರುವಿನ, ಸಿದ್ದಾಪೂರದ ಅರವಿಂದ ಒಡೆಯರ, ಖಿಲಾರಹಟ್ಟಿ ರಮಾನಂದ ಮಹಾರಾಜರು, ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೀಲಕಂಠಪ್ಪ ಪೂಜಾರಿ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಎಸ್.ದೇಶಮುಖ(ಕುಂಚಗನೂರ), ನಿವೃತ್ತ ಸಹಕಾರಿ ಇಲಾಖೆ ಅಧಿಕಾರಿ ಪಿ.ಬಿ.ಕಾಳಗಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ನೇತೃತ್ವ ವಹಿಸಿದ್ದ ಸಮಾಜ ಸೇವಕ ಎಂ.ಎನ್.ಮದರಿ, ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ವಕೀಲ ಬಿ.ಜಿ.ಜಗ್ಗಲ್, ಮೂಕಿಹಾಳದ ಕಾಶೀಂಪಟೇಲ್ ಪಟೇಲ್, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಜಿಪಂ ಮಾಜಿ ಸದಸ್ಯ ಬಸವರಾಜ ಶಿರೋಳ, ಎಂ.ಎಸ್.ಅಮಲ್ಯಾಳ ವಕೀಲರು. ಡಿಎಸ್‍ಎಸ್ ಮುಖಂಡ ಹರೀಶ ನಾಟೀಕಾರ, ಗಣ್ಯ ವ್ಯಾಪಾರಸ್ಥ ಬಸಲಿಂಗಪ್ಪ ರಕ್ಕಸಗಿ, ಮುರಾಳದ ಚಂದ್ರಶೇಖರ ನಾಗರಬೆಟ್ಟ, ಯರಝರಿಯ ಮಲ್ಲಣ್ಣ ಅಪರಾಧಿ, ಮಲ್ಲು ದೊಡಮನಿ, ಮುತ್ತಣ್ಣ ನರೂಡಿ, ರವಿ ಜಗಲಿ, ಗುರುಲಿಂಗಪ್ಪ ಸುಲ್ಲಳ್ಳಿ, ಎಂ.ಬಿ.ಕೆಸರಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು. ವೀರೇಶ ಗೂಡಲಮನಿ ಹಾಗೂ ಸಿದ್ದನಗೌಡ ಕಾಶಿನಕುಂಟಿ ನಿರೂಪಿಸಿದರು. ಸಾಮೂಹಿಕ ಕಾರ್ಯಕ್ರಮದಲ್ಲಿ ಒಟ್ಟು 12 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು.