ದಂತ ವೈದ್ಯ ಮಾಣಿಕ್ ಸಹಾಗೆ ಒಲಿದ ಸಿಎಂ ಪಟ್ಟ

ಅಗರ್ತಲಾ, ಮೇ.14- ತ್ರಿಪುರಾ ನೂತನ ಮುಖ್ಯಮಂತ್ರಿ ಆಗಿ ಮಾಣಿಕ್ ಸಹಾ ಆಯ್ಕೆಯಾಗಿದ್ದಾರೆ. ಮುಂದಿನ ಒಂದು ವರ್ಷ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.ಕಳೆದ ತಿಂಗಳಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಬಿಪ್ಲಬ್​ ಕುಮಾರ್​ ದೇಬ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮಾಣಿಕ್ ಸಹಾ ಅವರ ಆಯ್ಕೆ ಮಾಡಲಾಗಿದೆ. ಡಾ.ಸಹಾ ವೃತ್ತಿಯಲ್ಲಿ ದಂತವೈದ್ಯರಾಗಿದ್ದಾರೆ.
ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಾಣಿಕ್ ಸಹಾಗೆ ಇದೀಗ ಹೈಕಮಾಂಡ್ ಮಣೆ ಹಾಕಿದೆ.2018ರಲ್ಲಿ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿಪ್ಲಬ್​ ಕುಮಾರ್ ದೇವ್ ಇಂದು​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲು ಕೇವಲ ಒಂದು ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ.
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಡಾ. ಮಾನಿಕ್ ಸಹಾ ಅವರಿಗೆ ಬಿಪ್ಲಬ್ ಕುಮಾರ್
ಅಭಿನಂದನೆ ಸಲ್ಲಿಸಿದ್ದಾರೆ.