ದಂತ ವೈದ್ಯಕೀಯ ಪರೀಕ್ಷೆ ಮುಂದೂಡಲು ಆಗ್ರಹ

ಕಲಬುರಗಿ,ಜು.22: ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಭವಿಷ್ಯದ ಹಿತಾಸಕ್ತಿಗಾಗಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಒತ್ತಾಯಿಸಿದ್ದಾರೆ.
ಆರ್‍ಜಿಯುಹೆಚ್‍ಎಸ್ ಸಂಸ್ಥೆಯು ಅಂತಿಮ ವರ್ಷದ ದಂತ ವೈದ್ಯಕೀಯ ಪರೀಕ್ಷೆಗಳನ್ನು ಆಗಸ್ಟ್ ತಿಂಗಳಿಗೆ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಅತೀವ ಆತಂಕ ಮೂಡಿದೆ. ಕೋವಿಡ್ ಕಾರಣದಿಂದಾಗಿ ಹಿಂದಿನ ಮತ್ತು ಪ್ರಸ್ತುತ ವರ್ಷದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಹಲವು ಏರುಪೇರುಗಳಾಗಿದ್ದವು. ಹಾಗಾಗಿ, ಅಸಮರ್ಪಕ ಕ್ಲಿನಿಕಲ್ ಪೆÇೀಸ್ಟಿಂಗ್, ಪರಿಣಾಮಕಾರಿ ಅಲ್ಲದ ಆನ್ ಲೈನ್ ತರಗತಿಗಳು ಹಾಗೂ ಪರೀಕ್ಷೆಗೆ ತಯಾರಾಗಲು ಸಮಯದ ಕೊರತೆ ಇವುಗಳಿಂದಾಗಿ ವಿದ್ಯಾರ್ಥಿಗಳು ಅತ್ಯಂತ ಒತ್ತಡದಲ್ಲಿ ಇದ್ದಾರೆ ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಅಂತಿಮ ವರ್ಷ ಆರಂಭವಾಗಿದ್ದು ಜನವರಿ ತಿಂಗಳಲ್ಲಿ ಆರ್‍ಜಿಯುಹೆಚ್‍ಎಸ್‍ನ ಮಾರ್ಗಸೂಚಿಯ ಪ್ರಕಾರ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 10 ತಿಂಗಳ ಕ್ಲಿನಿಕಲ್ ಪೆÇೀಸ್ಟಿಂಗ್ ಆಗಬೇಕು. ಆದರೆ, ಈಗ ನಿಗದಿಯಾಗಿರುವ ಪರೀಕ್ಷಾ ವೇಳಾಪಟ್ಟಿ ಪ್ರಕಾರ, 10 ತಿಂಗಳ ಬದಲು ಕೇವಲ 6 ತಿಂಗಳ ಕಾಲಾವಧಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕು. ಇನ್ನೂ ಹಲವು ಕಾಲೇಜುಗಳಲ್ಲಿ ಪಾಠಗಳು ಮುಗಿದಿಲ್ಲ. ಆರ್‍ಜಿಯುಹೆಚ್‍ಎಸ್‍ನ ಕ್ಲಿನಿಕಲ್ ಪೆÇೀಸ್ಟಿಂಗ್ ಕೋಟಾದ ಶೇಕಡಾ 50ರಷ್ಟು ಸಹ ಹಲವಾರು ಕಾಲೇಜುಗಳಲ್ಲಿ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳ ನಡುವೆ ಸಮೀಕ್ಷೆ ನಡೆಸಿತು. ರಾಜ್ಯದ 1250 ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ, 917 ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಭಾಗಿಯಾಗಿ ಸಹಿ ಮಾಡಿದ್ದಾರೆ. ಬರೋಬ್ಬರಿ ಶೇಕಡಾ 99.7 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಲು ಮನವಿ ಮಾಡಿದ್ದಾರೆ. ಮತ್ತು ಶೇಕಡಾ 86.2 ರಷ್ಟು ವಿದ್ಯಾರ್ಥಿಗಳು ಪಾಠಗಳು ಮುಗಿದಿಲ್ಲ, ಕ್ಲಿನಿಕಲ್ ಪೆÇೀಸ್ಟಿಂಗ್ ಸಾಕಷ್ಟು ನಡೆದಿಲ್ಲ ಹಾಗೂ ಪರೀಕ್ಷೆಗೆ ತಯಾರಾಗಲು ಸಮಯದ ಅಭಾವದ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಭವಿಷ್ಯದ ಹಿತಾಸಕ್ತಿಯಿಂದ, ಅಂತಿಮ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.