ದಂತ ರಕ್ಷಣೆ ವ್ಯಕ್ತಿ ಆರೋಗ್ಯಕ್ಕೆ ಸಹಕಾರಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 27: ದಂತ ರಕ್ಷಣೆ ವ್ಯಕ್ತಿ ಆರೋಗ್ಯಕ್ಕೆ ಸಹಕಾರಿ ಎಂದು ಆರೋಗ್ಯ ಅಧಿಕಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆ ಮಾಡುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಮಕ್ಕಳು ಮತ್ತು ಮಕ್ಕಳ ತಾಯಂದಿರಿಗೆ ದಂತ ತಪಾಸಣೆ ಕಾರ್ಯ ನಡೆಯುವ ವೇಳೆ ಅವರು ಮಾತನಾಡಿದರು, ತಿನ್ನುವ ಆಹಾರ ಜೀರ್ಣವಾಗಲು ಹಲ್ಲುಗಳು ಸುಭದ್ರವಾಗಿರ ಬೇಕು,ಹಲ್ಲು ಹುಳುಕು ಆಗುವ ಮೊದಲೇ ಕಾಳಜಿ ವಹಿಸಬೇಕು, ದಂತ ರಕ್ಷಣ ಮಕ್ಕಳ ಹುಟ್ಟಿದಾಗಿನಿಂದ ಪ್ರಾರಂಭವಾಗುತ್ತದೆ, ಹಾಲು ಕುಡಿಸಿದ ನಂತರ ಬಾಯಿ ಸ್ವಚ್ಛ ಗೊಳಿಸಬೇಕು, ಹಲ್ಲು ಬಂದ ನಂತರ ಕೈ ಬೆರಳಿಂದ ಮೃದುವಾಗಿ ಒಸಡು ಮತ್ತು ಹಲ್ಲುಗಳನ್ನು ಉಜ್ಜಬೇಕು, ಮಕ್ಕಳು ದೊಡ್ಡವರಾದ ನಂತರ ಮೃದು ಬ್ರಷ್ ನಿಂದ ಹಲ್ಲುಜ್ಜುವ ಅಭ್ಯಾಸ ಮಾಡಲು ಹೇಳಿ ಕೊಡ ಬೇಕು, ಅಂಟು ಪದಾರ್ಥಗಳು ಹಲ್ಲನ್ನು ಹಾಳು ಮಾಡುತ್ತವೆ, ಬಾಯಿ ಚೆನ್ನಾಗಿ ಪುಕ್ಕಳಸಿ ತೊಳೆಯ ಬೇಕು, ಗರ್ಭಿಣಿಯರು ಕನಿಷ್ಠ ಎರಡು ಬಾರಿ ಬಾಯಿ ತಪಾಸಣೆ ಮಾಡಿಸಿಕೊಳ್ಳುವುದು ಕಡ್ಡಾಯ, ತಂಬಾಕು, ನಸೆ ಪುಡಿ,ಗುಟುಕ ಹಾಕಬಾರದು, ಹಲ್ಲಿನ ತೊಂದರೆಯೊಂದಿಗೆ, ಮಕ್ಕಳ ಮಾಸಿಕ ಆರೋಗ್ಯಕ್ಕೂ ಹಾನಿಯಾಗುವುದು, ಕ್ಯಾನ್ಸರ್‍ಗೂ ಕಾರಣ ವಾಗಬಹುದು ಎಂದು ತಿಳಿಸಿದರು, ಮತ್ತೊಬ್ಬ ದಂತ ಆರೋಗ್ಯ ಅಧಿಕಾರಿ ಡಾ.ಕಲಾವತಿ ಎಲ್ಲರಿಗೂ ತಪಾಸಣೆ ಮಾಡಿದರು, ಹುಳುಕು ಬರುವ ಸಾಧ್ಯತೆ ಇದ್ದ ಮಕ್ಕಳಿಗೆ ಜೆಲ್ ನಿಂದಹಲ್ಲು ಸ್ವಚ್ಛ ಗೊಳಸಿದರು,
 ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್, ಡಾ.ರಾಮಕೃಷ್ಣ, ಡಾ.ಅಕ್ಷಯ್ ಶಿವಪುರ, ಅಂಗನವಾಡಿ ಮೇಲ್ವಿಚಾರಕಿಯರಾದ ಎಮ್.ಎಮ್.ಭಜಂತ್ರಿ, ಲಕ್ಷ್ಮಿ ಕಂಕಣವಾಡಿ,ಶಾರದಾ,ಶರಣಬಸವೇಶ್ವರಿ, ಗೀತಾ, ಚೇತನಾ,ಬಿ.ಹೆಚ್.ಇ. ಓ ಶಿವಪ್ಪ, ಆಪ್ತ ಸಮಾಲೋಕ ನಾಗ¨

One attachment • Scanned by Gmail