ದಂತ ರಕ್ಷಣೆ ಅತಿ ಅಗತ್ಯ- ಡಾ. ವಿಶಾಲಾಕ್ಷಿ


ಸಂಜೆವಾಣಿ ವಾರ್ತೆ
ಸಂಡೂರು: ಅ: 4:  ದೇಹದ ಪ್ರಮುಖ ಅಂಗವಾದ ಬಾಯಿಯ ರಕ್ಷಣೆ ಅತಿ ಅಗತ್ಯ, ಮುಖದ ಅಂದಕ್ಕೆ ಹಲ್ಲು ಬಹುಮುಖ್ಯ ಅದರೆ ಇಂದು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ದಂತಕ್ಷಯ, ರೋಗ ಕಾಣಿಸಿಕೊಂಡು ವಿಪರೀತ ಸಮಸ್ಯೆ ಅನುಭವಿಸುತ್ತಿರುವುದು ಕಂಡುಬರುತ್ತಿದ್ದು ಅದರ ರಕ್ಷಣೆ ಬಹು ಮುಖ್ಯ ಎಂದು ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಾ. ವಿಶಾಲಾಕ್ಷಿ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ದೇಶಿಸಿ ಮಾತನಾಡಿ ಇಂತಹ ಶಿಬಿರಗಳಿಂದ ಜನರಿಗೆ ಬಾಯಿ ಆರೋಗ್ಯದ ಕಾಳಜಿ ಹೆಚ್ಚಾಗಲಿದೆ, ಮಕ್ಕಳ ಹಲ್ಲುಗಳ ಬಗ್ಗೆಯೂ ಹೆಚ್ಚಿನ ಕಾಳಜಿ ಮಾಡಲಿದ್ದಾರೆ, ಮತ್ತು ಮೂರಕ್ಕಿಂತ ಹೆಚ್ಚು ಹಲ್ಲು ಹೋಗಿರುವವರಿಗೆ ಉಚಿತ ಹಲ್ಲಿನ ಸೆಟ್ ಕೊಡಲು ಶಿಬಿರಗಳು ಸಹಾಯ ಮಾಡಲಿವೆ ಇದರ ಸದುಪಯೋಗ ಪಡೆದು ಕೊಳ್ಳಬೇಕು, ವಿಶೇಷವಾಗಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಿಬಿರ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಗ್ರಾಮದ ಒಟ್ಟು ಏಳು ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ದಂತ ತಪಾಸಣೆ ನಡೆಸಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಬಾಯಿ ಆರೋಗ್ಯ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ ಮಾತನಾಡಿ ಈ ಶಿಬಿರದಲ್ಲಿ ಸಂಡೂರು ಸಾರ್ವಜನಿಕ ಆಸ್ಪತ್ರೆಯ ದಂತ ಆರೋಗ್ಯಾಧಿಕಾರಿ ಡಾ.ಅಪೋರೀಜ್ ಬಾನು,ಡಾ.ಕಲಾವತಿ, ಕಂಪ್ಲಿ ಸ.ಆ.ಕೇಂದ್ರದ ಡಾ.ಶ್ರೀನಿವಾಸ್, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿ ಡಾ.ಸಾದಿಯಾ,ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ,ಎಸ್.ಡಿ.ಎಮ್.ಸಿ ಅಧ್ಯಕ್ಷ ಹೊನ್ನೂರಪ್ಪ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ ಕಂಕಣವಾಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಶಂಕ್ರಮ್ಮ,ಜಯಪ್ರಧ,ಮಲ್ಲಮ್ಮ,ತಿಮ್ಮಕ್ಕ,ಪ್ರತಿಭಾ, ಸುಮಾ,ಮಾಂತಮ್ಮ,ಪಾರ್ವತಿ, ಸಿದ್ದೇಶ್,ರಾಜು ನಾಯ್ಕ ಇತರರು ಉಪಸ್ಥಿತರಿದ್ದರು