ದಂತವೈದ್ಯಕೀಯ ಪರೀಕ್ಷೆಯಲ್ಲಿ ರ್ಯಾಂಕ್

ಚಿತ್ರದುರ್ಗ, ಜ. 9 – ರಾಜೀವಗಾಂಧಿ ವಿಶ್ವವಿದ್ಯಾಲಯವು ನಡೆಸಿದ 2019-2020ನೇ ಸಾಲಿನ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯಕ್ಕೆ ಅಂತಿಮ ದಂತ ವೈದ್ಯಕೀಯ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕ ಮತ್ತು ಎರಡು ರ‍್ಯಾಂಕ್‌ಗಳು ಬಂದಿವೆ ಎಂದು ಪ್ರಾಂಶುಪಾಲರಾದ ಡಾ. ಗೌರಮ್ಮ ತಿಳಿಸಿದ್ದಾರೆ.ಡಾ. ಸಂಗೀತಾ ಮನೋಜ್ ಮತ್ತು ಡಾ.ದೇವಿಕಾ ವಾಸ್ವಾನಿ –  ಚಿನ್ನದ ಪದಕ ಮತ್ತು ರ‍್ಯಾಂಕ್ ಹಾಗು ಡಾ.ತುರ್ಫಾ ಮಹಮ್ಮದ್ – ರ‍್ಯಾಂಕ್ ವಿಜೇತರಾಗಿದ್ದಾರೆ. ಅಲ್ಲದೇ, ಅಂತಿಮ ವರ್ಷದ  27 ವಿದ್ಯಾರ್ಥಿಗಳು ಮತ್ತು ದ್ವಿತೀಯ ವರ್ಷದ 25ವಿದ್ಯಾರ್ಥಿಗಳು ಹಾಗು ತೃತೀಯ ವರ್ಷದ 10 ವಿದ್ಯಾರ್ಥಿಗಳು ವಿಷಯಾವಾರು ರ‍್ಯಾಂಕ್‌ಗಳನ್ನು ಪಡೆದು ಕಾಲೇಜಿಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದು, ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು, ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಗೌರಮ್ಮ ಹಾಗು ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಚಿನ್ನದ ಪದಕ ಹಾಗು ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.