ದಂತಕಥೆಗೆ ಕ್ರೇಜಿಸ್ಟಾರ್ ಸಾಥ್

•             ಚಿ.ಗೋ ರಮೇಶ್

ಒಂದಷ್ಟು ಪ್ರತಿಭಾವಂತರ ತಂಡ ಸೇರಿಕೊಂಡು ನಿರ್ಮಿಸಿರುವ “ ದಂತಕಥೆ” ಚಿತ್ರದ ಕೋರೊನಾ ಸೋಂಕಿನ ಅಡೆ ತಡೆ ದಾಟಿಕೊಂಡು ಚಿತ್ರೀಕರಣ ಪೂರ್ಣಗೊಳಿಸಿದೆ. ಕೋವಿಡ್ ಪೂರ್ವದಲ್ಲಿ ಆರಂಭವಾಗಿದ್ದ ಚಿತ್ರ ಇದೀಗ ಡಿಐ ಹಂತದಲ್ಲಿದ್ದು ಎಲ್ಲಾ ಕೆಲಸ ಪೂರ್ಣಗೊಳಿಸಿ ಶೀಘ್ರ ತೆರೆಗೆ ತೆರೆಉವ ಉದ್ದೇಶ ಚಿತ್ರತಂಡದ್ದು.

ಈ ಚಿತ್ರದ ಮೂಲಕ ವಚನ್ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದು ಬಹುಭಾಷ ನಟ ಕಿಶೋರ್ ಹಾಗು ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ದಂತಕಥೆಯ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದ್ದಾರೆ.

ಈ ವೇಳೆ ಮಾತಿಗಳಿಗ ನಿರ್ದೇಶಕ ವಚನ್, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತನಿಖೆಯ ಸುತ್ತ ನಡೆಯುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ, ಕೊರೊನಾ ಮುಂಚೆ ಆರಂಭವಾಗಿದ್ದ ಚಿತ್ರ ಆನಂತರ ಇಡೀ ಚಿತ್ರರಂಗ ಸ್ತಬ್ಧವಾಗಿದ್ದ ನಮ್ಮ ಚಿತ್ರವೂ ನಿಂತುಹೋಯಿತು. ಕರಾಳ ಅಧ್ಯಾಯ ಮುಗಿದ ನಂತರ ಚಿತ್ರೀಕರಣ ಆರಂಭಿಸಿ ಪೂರ್ಣಗೊಳಿಸಿದ್ದೇವೆ. ತನಿಖಾ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಘಟನೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಚಿತ್ರದ ತಿರುಳು.

ಚಿತ್ರದಲ್ಲಿ ರಘುಮುಖರ್ಜಿ ಎಸ್ ಐ ಪಾತ್ರದಲ್ಲಿ ಹಾಗು ಕಿಶೋರ್ ಅವರು ವಿಶೇಷ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲೆ ಸುಲಿಗೆ, ದರೋಡೆ ಪ್ರಕರಣವನ್ನು ಹೇಗೆ ನಿಬಾಯಿಸಯತ್ತಾರೆ ಎನ್ನುವುದು ಚಿತ್ರದ ಕುತೂಹಲದ ಸಂಗತಿ ಎನ್ನುವ ವಿವರ ನೀಡಿದರು.

ನಟ ಕಿಶೋರ್ ಮಾತನಾಡಿ ಸಿನಿಮಾದ ಐಡಿಯಾ ಹುಟ್ಟಿ ಅದನ್ನು ಜನರ ಮುಂದೆ ಬರುವ ತನಕ ಕಟ್ಟಿಕೊಡುವೇ ಹಾದಿಯೇ ಒಂದು ದಂತಕಥೆ.  ಹೊಸತನದ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆಯೇ ಇದು ಎಂದರೆ ಮತ್ತೊಬ್ಬ ನಟ ರಘು ಮುಖರ್ಜಿ, ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಜನರಿಗೆ ಇಷ್ಟವಾಗಲಿದೆ ಎಂದರು. ನಾಯಕಿ ಯಶ ಶಿವಕುಮಾರ್, ನಾಲ್ಕು ವರ್ಷದ ಹಿಂದೆ ಆರಂಭವಾದ ಕಥೆ ಚಿತ್ರದಲ್ಲಿ ನನ್ನದು ಪ್ರಾಚ್ಯವಸ್ತುಶಾಸ್ತ್ರ ವಿದ್ಯಾರ್ಥಿಯ ಪಾತ್ರ ಎನ್ನುವ ವಿವರ ನೀಡಿದರು.

ಚಿತ್ರಕ್ಕೆ ಬಂಡವಾಳ ಹಾಕಿರುವ ಅರುಣ್ ಕುಮಾರ್, ಜನಾರ್ಧನ್, ಧರಣಿ ಎಸ್.ಕೆ ಗೌಡ, ಸಂಭಾಷಣೆ ಬರೆದಿರುವ ಮಾಸ್ತಿ, ಛಾಯಾಗ್ರಹಕ ನವೀನ್ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.