ದಂಡ ತಡೆಗೆ ಮನವಿ


ಲಕ್ಷ್ಮೇಶ್ವರ,ಜೂ.3: ಮುಂಗಾರಿನ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು ಬಿತ್ತನೆಗಾಗಿ ಹೊಲ ಗದ್ದೆಗಳನ್ನು ಹಸನಗೊಳಿಸುತ್ತಿದ್ದಾರೆ.
ರೈತರು ಟ್ರಾಕ್ಟರ್ ಬಳಸಿ ರಂಟೆ, ಕುಂಟೆ ಹೊಡೆಯುತ್ತಿದ್ದು ಡಿಸೈಲ್ ತೀರಿದಾಗ ಹೊಲಗಳಿಂದಲೆ ನೇರವಾಗಿ ಪೆಟ್ರೋಲ್ ಡೀಸೆಲ್ ಗಾಗಿ ಧಾವಿಸುತ್ತಿದ್ದು ಚೆಕ್ ಪೆÇೀಸ್ಟ್ ಗಳಲ್ಲಿ ರೈತರ ಮೋಟರ್ ಸೈಕಲ್, ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದು ಇದನ್ನು ಕೂಡಲೇ ನಿಲ್ಲಿಸುವಂತೆ ರೈತ ಮುಖಂಡ ಸೋಮಣ್ಣ ಬೆಟಗೇರಿ ಎಸ್.ಪಿ ಹಾಗೂ ಡಿಸಿ ಅವರಿಗೆ ಮನವಿ ಮಾಡಿದ್ದಾರೆ.
ಅವರು ನೀಡಿರುವ ಹೇಳಿಕೆಯಲ್ಲಿ ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು ಅವುಗಳ ನಡುವೆಯೂ ಬಿತ್ತನೆಗಾಗಿ ಸಜ್ಜುಗೊಳ್ಳುತ್ತಿರುವ ಸಂದರ್ಭದಲ್ಲಿ ಅವಶ್ಯವಾಗಿರುವ ಬೀಜ ಗೊಬ್ಬರ ಇಂಧನ ತರಲು ಮೋಟರ್ ಸೈಕಲ್ ತೆಗೆದುಕೊಂಡು ಹೋಗುವ ರೈತರಿಗೆ 500, 1000 ರೂ ದಂಡ ವಿಧಿಸುತ್ತಿದ್ದು ಕಂಬದ ಪೆಟ್ಟು ಕಪ್ಪಾಳದ ಪೆಟ್ಟನ್ನು ಅನುಭವಿಸಬೇಕಾಗಿದೆ ಸಂಬಂಧಪಟ್ಟವರಿಗೆ ಮಾರ್ಗದರ್ಶನ ಮಾಡಬೇಕು ಎಂದು ಎಸ್. ಪಿ ಡಿಸಿ ಅವರಿಗೆ ಮನವಿ ಮಾಡಿದ್ದಾರೆ.