ದಂಡೋತಿ: ಸಹಸ್ರ ದೀಪೋತ್ಸವ

ಕಲಬುರಗಿ:ಮೇ.2: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಆರಾಧ್ಯ ದೈವ ಬಲಭೀಮೇಶ್ವರ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಬಲಭೀಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷೆ ಬಾಲಯೋಗಿ ಪೂಜ್ಯ ಜಯಶ್ರೀ ಮಾತಾಜೀ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಅತಿ ಸರಳವಾಗಿ ಸಹಸ್ರ ದೀಪೋತ್ಸವ, ಪೂಜೆ ಕೈಂಕರ್ಯಗಳು ನಡೆದವು.
ಚಿತ್ತಾಪುರದ ಕಂಬಳೇಶ್ವರ ಮಠದ ಪೂಜ್ಯ ಸೋಮೇಶ್ವರ ಶಿವಾಚಾರ್ಯರು, ಪೇಠ ಶಿರೂರನ ಶ್ರೀಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರು, ರಾವೂರ ಶ್ರೀಮಠದ ಪೂಜ್ಯರು, ಸಣ್ಣೂರ-ಬೆಣ್ಣೂರ(ಬಿ) ಮಾತಾ ಮಾಣಿಕೇಶ್ವರಿ ಆಶ್ರಮದ ಪೂಜ್ಯ ಭಾರದ್ವಾಜ ಸ್ವಾಮೀಜಿಗಳು ದೀಪೋತ್ಸವಕ್ಕೆ ಚಾಲನೆ ನೀಡಿದರು. ಈ ಮುಂಚೆ ಭಕ್ತಾದಿಗಳಿಗೆ ತಮ್ಮ ಮನೆಯಲ್ಲಿದ್ದುಕೊಂಡೇ ಪೂಜೆ, ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅತ್ಯಂತ ಸರಳವಾಗಿ ದೀಪೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ಸಿದ್ರಾಮಣ್ಣ ಸಣ್ಣೂರಕರ್, ಪ್ರಮುಖರಾದ ಮಲ್ಲಿಕಾರ್ಜುನ ಶಹಾಬಾದಕರ್, ಡಾ. ವೆಂಕಟೇಶ ಪುಲೇಕರ್, ಟೆಂಗಳಿ ಜಿಪಂ ಮಾಜಿ ಸದಸ್ಯ ರಾಜಶೇಖರ, ದತ್ತು ಬಂಡಿ, ವಿಷ್ಣುಕಾಂತ, ಭೀಮರಾವ ಹಡಪದ, ಕಾಶಣ್ಣ, ಜಗದೇವಪ್ಪ ಪಾಟೀಲ್ ಕೊಂಕನಳ್ಳಿ, ಶಿವಶರಣಪ್ಪ ಮೂಕೆ ಮತ್ತಿತರರು ಭಾಗವಹಿಸಿದ್ದರು.