ದಂಡು ಗ್ರಾಮದ ೧೧೦ ಮನೆಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

ರಾಯಚೂರು.ನ.೧೪-ನಗರದ ವ್ಯಾಪ್ತಿಯಲ್ಲಿ ಬರುವ ದಂಡು ಗ್ರಾಮದ ೧೧೦ ಮನೆಗಳ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಮನೆಗಳು ಹೋಗುತ್ತಿವೆ ಎಂದು ಭಯಭೀತರಾಗಿದ್ದು ತಕ್ಷಣವೇ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷರು ಹಾಗೂ ಆಕಾಂಕ್ಷಿ ಡಿ.ವೀರೇಶ ಕುಮಾರ ಅವರು ಒತ್ತಾಯಿಸಿದ್ದಾರೆ.
ಅವರು ದಂಡು ಗ್ರಾಮಕ್ಕೆ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮ ಮಾಡಲು ಹೋದಾಗ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದು , ಮನೆಗಳು ವಿಮಾನ ನಿಲ್ದಾಣದ ಒಳಗೆ ಹೋಗುತ್ತವೆ. ಮುಂದೆ ನಮ್ಮ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ೮-೧೦ ದಶಕಗಳಿಂದ ವಾಸ ಮಾಡಿಕೊಂಡು ದ೦ಡು ಗ್ರಾಮದವರು ಎಂದು ಎನಿಸಿಕೊಂಡಿರುವ ೧೧೦ ಮನೆಗಳ ನಿವಾಸಿಗಳು ಈಗ ವಕ್ಕಲೆಬ್ಬಿಸಿದರೆ ಅವರ ಗತಿಯೇನು ? ತಕ್ಷಣವೆ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ಮುಂದಾಗಬೇಕೆಂದು ಡಿ.ವೀರೇಶ ಕುಮಾರ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸೈಯದ್ ನುಸುರತ್ ಅಲಿ,ಮೋಸಿನ್, ತಿರುಮಲರೆಡ್ಡಿ, ಅಮಿತ ಇನ್ನಿತರರು ಇದ್ದರು .