ದಂಡಾವತಿ ಯೋಜನೆಗೆ ಪುನರ್ ಚಾಲನೆ; ಸಿಎಂ ಭರವಸೆ

ಸೊರಬ.ನ.೧೭ : ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ದಂಡಾವತಿ ಯೋಜನೆಯನ್ನು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಪುನರ್ ಚಾಲನೆ ನೀಡಲು ಸದ್ಯದಲ್ಲಿಯೇ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.ತಾಲೂಕಿನ ಆನವಟ್ಟಿಯಲ್ಲಿ ಬಿಜೆಪಿ ವತಿಯಿಂದ  ಹಮ್ಮಿಕೊಂಡ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ದೇವರಾಜ್ ಅರಸು ಅವರು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ, ಗೇಣಿದಾರರ ಪರ ಕಾನೂನು ರೂಪಿಸಿದರು. ಎಸ್.ಬಂಗಾರಪ್ಪ, ಯಡಿಯೂರಪ್ಪ ಅವರು ಕೂಡ ಅದೇ ದಾರಿಯಲ್ಲಿ ನಡೆದರು. ಎಸ್. ಬಂಗಾರಪ್ಪ ಯಾವುದೇ ಪಕ್ಷದವರಾಗಿ ಗುರುತಿಸಿಕೊಂಡಿರಲಿಲ್ಲ. ಪಕ್ಷಗಳೇ ಬಂಗಾರಪ್ಪ ಅವರನ್ನು ಅವಲಂಭಿಸಿದ್ದವು. ಹೀಗಾಗಿ ರಾಜ್ಯದಲ್ಲಿ ಬಂಗಾರಪ್ಪ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದರು. ಯಡಿಯೂರಪ್ಪ ಅವರಿಂದ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾಗುವ ಜತೆಗೆ ಸಮಗ್ರ ಅಭಿವೃದ್ಧಿ ಕಂಡಿದೆ. ಇನ್ನೂ ಜನರ ಸೇವೆ ಮಾಡುವ ಇಂಗಿತವನ್ನು ಯಡಿಯೂರಪ್ಪ ಹೊಂದಿದ್ದು ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡಿ ಪಕ್ಷ ಕಟ್ಟುತ್ತಿದ್ದಾರೆ. ಪೈಪೋಟಿಯಲ್ಲಿ ಕೆಲಸ ಮಾಡುವ ಶಾಸಕರನ್ನು ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಹುಟ್ಟುಹಾಕಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 800 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು ಸದ್ಯದಲ್ಲಿ ಉದ್ಘಾಟಿಸಲಾಗುವುದು ಎಂದರು.ಅಹಿಂದಾ ಎಂದು ಹೇಳುತ್ತಾ ಕಾಂಗ್ರೆಸ್ ನವರು ಮುಂದೇ ಬಂದರೇ ಹೊರೆತು ಅಹಿಂದಾ ಸ್ಥಿತಿ ಮಾತ್ರ ಅಲ್ಲೆ ಇದೆ. ಜಾತಿ, ಧರ್ಮ ಒಡೆದು ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ. ಅನ್ನಭಾಗ್ಯದ ಮೂಲಕ ಅನ್ನಕ್ಕೆ ಕನ್ನಹಾಕಿದ್ದಲ್ಲದೆ ಅನೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿದ್ದು ಬಹಿರಂಗವಾಗದೆ ಉಳಿದಿಲ್ಲ. ವಿವೇಕಾ ಹೆಸರಿನಡಿ 800 ಶಾಲಾ ಕೊಠಡಿಗಳನ್ನು ನಿರ್ಮಿಸಲು ಶಿಲನ್ಯಾಸ ನಡೆಸಲಾಗಿದೆ. ಸಮಾಜವಾದದ ಸಿದ್ಧಾಂತದಡಿಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರೈತರ, ಕಾರ್ಮಿಕರ, ಮೀನುಗಾರರ ಮಕ್ಕಳು ವಿದ್ಯಾಭ್ಯಾಸ ಮಾಡಲು ವಿದ್ಯಾನಿಧಿ ನೀಡಲಾಗಿದೆ. ಯಶಸ್ವಿನಿ ಯೋಜನೆ ಮತ್ತೆ ತರಲಾಗಿದೆ. ರೈಲ್ವೆ ವ್ಯವಸ್ಥೆಯನ್ನು ತಾಳಗುಪ್ಪದಿಂದ ಮುಂದುರೆಸಲು ಕೇದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮೋದಿ ಅವರ ಆಡಳಿತ, ಪರಿಶ್ರಮದಿಂದ ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗುತ್ತಿದ್ದು ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದ್ದು ಕೆಲವೇ ವರ್ಷಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆಯಲಿದೆ. ಸೊರಬವನ್ನು ಮಾದರಿ ತಾಲೂಕು ಮಾಡುವ ಚಿಂತನೆ ಯಡಿಯೂರಪ್ಪ ಅವರಿಗಿದ್ದು ಸಹಕರಿಸುವುದಾಗಿ ತಿಳಿಸಿದ ಅವರು ಯಡಿಯೂರಪ್ಪ ಅವರು ರೈತರಿಗೆ, ಧೀನ ದಲಿತರಿಗೆ, ಮಹಿಳೆಯರಿಗೆ ತಂದಿರುವ ಯೋಜನೆಗಳನ್ನು ಸ್ಮರಿಸಿಕೊಂಡರು.